ADVERTISEMENT

ಕೋವಿಡ್–19: ಸಿಂಗಾಪುರದಿಂದ ಮೊದಲ ಹಂತದ ಆಕ್ಸಿಜನ್‌ ಸಿಲಿಂಡರ್‌ಗಳು ಭಾರತಕ್ಕೆ

ಪಿಟಿಐ
Published 28 ಏಪ್ರಿಲ್ 2021, 9:21 IST
Last Updated 28 ಏಪ್ರಿಲ್ 2021, 9:21 IST
ಸಿಂಗಾಪುರ ಗಣರಾಜ್ಯದ ವಾಯುಪಡೆಯ ಎರಡು ‘ಸಿ–130’ ವಿಮಾನಗಳಲ್ಲಿ ಸಿಲಿಂಡರ್‌ಗಳನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸಿಕೊಡಲಾಗಿದೆ – ಎಎಫ್‌ಪಿ ಚಿತ್ರ
ಸಿಂಗಾಪುರ ಗಣರಾಜ್ಯದ ವಾಯುಪಡೆಯ ಎರಡು ‘ಸಿ–130’ ವಿಮಾನಗಳಲ್ಲಿ ಸಿಲಿಂಡರ್‌ಗಳನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸಿಕೊಡಲಾಗಿದೆ – ಎಎಫ್‌ಪಿ ಚಿತ್ರ   

ಸಿಂಗಾಪುರ: ಭಾರತದ ಕೋವಿಡ್–19 ವಿರುದ್ಧದ ಹೋರಾಟಕ್ಕೆ ಬೆಂಬಲವಾಗಿ ಸಿಂಗಾಪುರವು ಮೊದಲ ಹಂತದ ವೈದ್ಯಕೀಯ ಆಮ್ಲಜನಕ (ಆಕ್ಸಿಜನ್) ಸಿಲಿಂಡರ್‌ಗಳನ್ನು ಕಳುಹಿಸಿಕೊಟ್ಟಿದೆ.

ಸಿಂಗಾಪುರ ಗಣರಾಜ್ಯದ ವಾಯುಪಡೆಯ ಎರಡು ‘ಸಿ–130’ ವಿಮಾನಗಳಲ್ಲಿ ಸಿಲಿಂಡರ್‌ಗಳನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸಿಕೊಡಲಾಗಿದೆ ಎಂದು ಅಲ್ಲಿನ ವಿದೇಶಾಂಗ ಸಚಿವಾಲಯ ಹೇಳಿರುವುದಾಗಿ ‘ಚಾನೆಲ್ ನ್ಯೂಸ್ ಏಷ್ಯಾ’ ವರದಿ ಮಾಡಿದೆ.

ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಮಾಲಿಕಿ ಉಸ್ಮಾನ್ ಅವರು ಪಯಾ ಲೆಬಾರ್ ವಾಯುನೆಲೆಯಲ್ಲಿ ಆಕ್ಸಿಜನ್ ಸಿಲಿಂಡರ್‌ಗಳನ್ನು ಭಾರತೀಯ ರಾಯಭಾರಿ ಪಿ.ಕುಮಾರನ್ ಅವರಿಗೆ ಬುಧವಾರ ಬೆಳಿಗ್ಗೆ ಹಸ್ತಾಂತರಿಸಿದ್ದಾರೆ.

‘ಈ ಸಾಂಕ್ರಾಮಿಕವು ಗಡಿಗಳನ್ನೂ ಮೀರಿ ಹೇಗೆ ಅಪಾಯಕಾರಿಯಾಗಿದೆ ಎಂಬುದನ್ನು ನಾವೆಲ್ಲ ಕಳೆದ ವರ್ಷ ನೋಡಿದ್ದೇವೆ. ಇದಕ್ಕೆ ದೇಶ, ರಾಷ್ಟ್ರೀಯತೆ, ಜನಾಂಗ ಎಂಬುದಿಲ್ಲ. ಹಾಗಾಗಿ ನಾವೆಲ್ಲ ಪರಸ್ಪರ ಬೆಂಬಲದೊಂದಿಗೆ ಸಾಮೂಹಿಕವಾಗಿ ಹೋರಾಡಬೇಕು’ ಎಂದು ಮಾಲಿಕಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.