ADVERTISEMENT

ಕಮಲಾದೇವಿ ಅರವಿಂದನ್‌ಗೆ ಸಿಂಗಪುರ ಹಾಲ್‌ ಆಫ್ ಫೇಮ್‌ ಗೌರವ

ಪಿಟಿಐ
Published 23 ಮಾರ್ಚ್ 2025, 14:49 IST
Last Updated 23 ಮಾರ್ಚ್ 2025, 14:49 IST
<div class="paragraphs"><p>ಕಮಲಾದೇವಿ ಅರವಿಂದನ್‌</p></div>

ಕಮಲಾದೇವಿ ಅರವಿಂದನ್‌

   

ಸಿಂಗಪುರ: ಭಾರತ ಮೂಲದ ಲೇಖಕಿ ಮತ್ತು ನಾಟಕ ರಚನಕಾರ್ತಿ ಕಮಲಾದೇವಿ ಅರವಿಂದನ್‌ ಅವರು ಸಿಂಗಪುರದ ‘ವುಮೆನ್ಸ್‌ ಹಾಲ್‌ ಆಫ್‌ ಫೇಮ್‌’ ಗೌರವಕ್ಕೆ ಪಾತ್ರರಾಗಿದ್ದಾರೆ. ಆರು ಮಂದಿಗೆ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಇದರೊಂದಿಗೆ, 2014ರಿಂದ ಈಚೆಗೆ 198 ಮಹಿಳೆಯರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ADVERTISEMENT

ಸಿಂಗಪುರದ ಮಹಿಳಾ ಸಂಘಟನೆಗಳ ಮಂಡಳಿಯು ಈ ಪ್ರಶಸ್ತಿಯನ್ನು ನೀಡುತ್ತದೆ. ಲಿಂಗ ಸಮಾನತೆಯಲ್ಲಿನ ಪ್ರಗತಿ, ಸಿಂಗಪುರದ ಇತಿಹಾಸ, ಸಮಾಜ ಮತ್ತು ಪ್ರಗತಿಗೆ ನೀಡುವ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.

ಅರವಿಂದನ್‌ ಅವರು ತಮಿಳು ಮತ್ತು ಮಲಯಾಳ ಲೇಖಕಿಯಾಗಿದ್ದು, ಅವರ ಕೆಲವು ಬರಹಗಳು ಇಂಗ್ಲಿಷ್‌ ಭಾಷೆಗೆ ತರ್ಜುಮೆಯಾಗಿವೆ.

ಅವರ 160 ಸಣ್ಣಕತೆಗಳು, 18 ನಾಟಕಗಳು, 300 ರೇಡಿಯೊ ನಾಟಕಗಳು ಮತ್ತು ಐದು ಪುಸ್ತಕಗಳು ಪ್ರಕಟವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.