ಸಿಂಗಪುರ: ಜಮ್ಮು– ಕಾಶ್ಮೀರ ಮತ್ತು ಪಾಕಿಸ್ತಾನಕ್ಕೆ ಅನಗತ್ಯ ಪ್ರವಾಸವನ್ನು ಕೈಗೊಳ್ಳದಂತೆ ಸಿಂಗಪುರ ಸರ್ಕಾರ ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ.
ಸಿಂಗಪುರದ ವಿದೇಶಾಂಗ ವ್ಯವಹಾರ ಸಚಿವಾಲಯವು, ಭಾರತ ಮತ್ತು ಪಾಕಿಸ್ತಾನದಲ್ಲಿರುವ ಸಿಂಗಪುರದ ಪ್ರಜೆಗಳು ಜಾಗರೂಕರಾಗಿರಬೇಕು ಮತ್ತು ವೈಯಕ್ತಿಕ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದೆ.
ಪ್ರಜೆಗಳು ಕಾನ್ಸುಲರ್‌ನಿಂದ ಅಗತ್ಯ ನೆರವನ್ನು ಪಡೆಯಬಹುದು. ಹೆಚ್ಚು ಜನರು ಗುಂಪು ಸೇರದಂತೆ, ಸ್ಥಳೀಯ ಸುದ್ದಿಗಳನ್ನು ಗಮನಿಸುವಂತೆ ಮತ್ತು ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸುವಂತೆಯೂ ಸಲಹೆ ನೀಡಿದೆ. ಅಲ್ಲದೇ ಸಚಿವಾಲಯದಲ್ಲಿ ಇ– ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.