ADVERTISEMENT

36 ನಿಮಿಷದಲ್ಲೇ ಕೋವಿಡ್‌ ಪತ್ತೆ: ಸಿಂಗಪುರ ವಿಜ್ಞಾನಿಗಳ ಸಾಧನೆ

ಪಿಟಿಐ
Published 27 ಜುಲೈ 2020, 16:44 IST
Last Updated 27 ಜುಲೈ 2020, 16:44 IST
   

ಸಿಂಗಪುರ: ಕೋವಿಡ್‌–19 ಪರೀಕ್ಷಾ ವರದಿಯ ಫಲಿತಾಂಶವು ಕೇವಲ 36 ನಿಮಿಷಗಳಲ್ಲಿ ದೊರೆಯುವಂಥ ಹೊಸ ವಿಧಾನವನ್ನು ಸಿಂಗಪುರ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದಾರೆ.

ನಾನ್‌ಯಂಗ್‌ ತಾಂತ್ರಿಕ ವಿಶ್ವವಿದ್ಯಾಲಯದ (ಎನ್‌ಟಿಯು) ಲೀ ಕಾಂಗ್‌ ಚಿಯಾನ್‌ ವೈದ್ಯಕೀಯ ವಿಭಾಗದ ವಿಜ್ಞಾನಿಗಳು ಈ ಹೊಸ ಮಾದರಿಯನ್ನು ಕಂಡುಹಿಡಿದಿದ್ದು,ಈ ಸಂಶೋಧನೆ ‘ಜೀನ್ಸ್‌’ ನಿಯತಕಾಲಿಕೆಯಲ್ಲಿ ಪ್ರಕಟಗೊಂಡಿದೆ.

ವೇಗ, ಸಮಯ ಮತ್ತು ವೆಚ್ಚದ ದೃಷ್ಟಿಯಿಂದ ಇದು ಲಾಭಕರವಾಗಿದೆ. ಪ್ರಸ್ತುತ ಅನುಸರಿಸುತ್ತಿರುವ ‘ಪಿಸಿಆರ್’ ಪರೀಕ್ಷಾ ವಿಧಾನಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚಿನ ವೇಗದಲ್ಲಿ ಫಲಿತಾಂಶ ಸಿಗಲಿದೆ.ಇದನ್ನು ಡೆಂಗಿ ಸೇರಿದಂತೆ ವಿವಿಧ ಸಾಂಕ್ರಾ‌ಮಿಕಗಳನ್ನು ಪತ್ತೆ ಹಚ್ಚಲು ಬಳಸಬಹುದಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ADVERTISEMENT

ಫಲಿತಾಂಶಕ್ಕಾಗಿಆರ್‌ಎನ್‌ಎ ಅನ್ನು ಶುದ್ಧೀಕರಿಸಿ ಬೇರ್ಪಡಿಸಲು ರಾಸಾಯನಿಕ ಬಳಸಬೇಕಿತ್ತು. ಇದಕ್ಕೆ ಹೆಚ್ಚು ಸಮಯ ತಗಲುತ್ತದೆ. ಹೊಸ ವಿಧಾನದಲ್ಲಿ ರಾಸಾಯನಿಕ ಬಳಸುವ ಅಗತ್ಯತೆಯೇ ಇಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.