ADVERTISEMENT

2025ರ ಚುನಾವಣೆಗೆ ಮುನ್ನ ನಿವೃತ್ತಿ: ಸಿಂಗಪುರ ಪ್ರಧಾನಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2023, 16:28 IST
Last Updated 5 ನವೆಂಬರ್ 2023, 16:28 IST
ಲೀ ಸಿಯೆನ್‌ ಲೂಂಗ್‌
ಲೀ ಸಿಯೆನ್‌ ಲೂಂಗ್‌   

ಸಿಂಗಪುರ: ಸಿಂಗಪುರ ಪ್ರಧಾನ ಮಂತ್ರಿ ಲೀ ಸಿಯೆನ್‌ ಲೂಂಗ್‌ ಅವರು 2025ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮೊದಲು ಉಪ ಪ್ರಧಾನಿ ಲಾರೆನ್ಸ್‌ ವಾಂಗ್‌ ಅವರಿಗೆ ಅಧಿಕಾರ ಹಸ್ತಾಂತರ ಮಾಡುವ ಯೋಜನೆ ಹೊಂದಿರುವುದಾಗಿ ಭಾನುವಾರ ತಿಳಿಸಿದರು.

71 ವರ್ಷದ ಲೀ ಅವರು 70ನೇ ವರ್ಷಕ್ಕೆ ಕಾಲಿಡುವಾಗ ನಿವೃತ್ತಿಯಾಗಲು ನಿರ್ಧರಿಸಿದ್ದರು. ಆದರೆ, ದೇಶದಲ್ಲಿ ಕೋವಿಡ್‌ ಸಾಂಕ್ರಾಮಿಕದ ಅಲೆ ಕಾಣಿಸಿಕೊಂಡಿದ್ದರಿಂದ ಆ ನಿರ್ಧಾರವನ್ನು ಮುಂದೂಡಿದ್ದರು.

ಪೀಪಲ್ಸ್ ಆಕ್ಷನ್ ಪಾರ್ಟಿ (ಪಿಎಪಿ) ಮುಖ್ಯಸ್ಥರಾಗಿ, 2004ರಿಂದ ಪ್ರಧಾನ ಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ. ತಮ್ಮ ಮುಂದಿನ ಉತ್ತರಾಧಿಕಾರಿಯಾಗಿ ಹಣಕಾಸು ಸಚಿವರೂ ಆಗಿರುವ ವಾಂಗ್ ಅವರನ್ನು ಕಳೆದ ವರ್ಷವೇ ಹೆಸರಿಸಿದ್ದರು. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.