ADVERTISEMENT

ಒಂದು ಡೋಸ್ ಸ್ಪುಟ್ನಿಕ್ ಲೈಟ್ ಕೋವಿಡ್ ಲಸಿಕೆ ಶೇ.80ರಷ್ಟು ಪರಿಣಾಮಕಾರಿ: ಅಧ್ಯಯನ

ರಾಯಿಟರ್ಸ್
Published 6 ಮೇ 2021, 16:19 IST
Last Updated 6 ಮೇ 2021, 16:19 IST
ಸ್ಪುಟ್ನಿಕ್ ಲೈಟ್ ಕೋವಿಡ್ ಲಸಿಕೆ
ಸ್ಪುಟ್ನಿಕ್ ಲೈಟ್ ಕೋವಿಡ್ ಲಸಿಕೆ   

ಮಾಸ್ಕೋ: ಒಂದು ಡೋಸ್ ಹಾಕಿಸಿಕೊಳ್ಳುವ ಸ್ಪುಟಿಕ್ ಲೈಟ್ ಕೋವಿಡ್ ಲಸಿಕೆಯ ಬಳಕೆಗೆ ರಷ್ಯಾದ ಡೈರೆಕ್ಟ್ ಇನ್ವೆಸ್ಟ್‌ಮೆಂಟ್ ಫಂಡ್ (ಆರ್‌ಡಿಐಎಫ್) ಗುರುವಾರ ಅನುಮೋದನೆ ನೀಡಿದೆ.

ಇದು ಅತಿ ಹೆಚ್ಚು ಕೋವಿಡ್ ಸೋಂಕು ಹೊಂದಿರುವ ರಾಷ್ಟ್ರಗಳಿಗೆ ಆದಷ್ಟು ಬೇಗನೇ ಲಸಿಕೆ ಸರಬರಾಜು ಮಾಡಲು ನೆರವಾಗಲಿದೆ.

ಮಾಸ್ಕೋದ ಗಮಲೆಯಾ ಇನ್ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್ ಲೈಟ್ ಕೋವಿಡ್ ಲಸಿಕೆಯು ಶೇಕಡಾ 79.4ರಷ್ಟು ಪರಿಣಾಮಕಾರಿಯಾಗಲಿದೆ ಎಂದು ಹೇಳಿದೆ.

ADVERTISEMENT

ಒಂದು ಡೋಸ್ ಸ್ಪುಟಿಕ್ ಲೈಟ್ ಲಸಿಕೆಯು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

ರಷ್ಯಾದಲ್ಲಿ ಕೋವಿಡ್ ಲಸಿಕೆ ಅಭಿಯಾನದ ಭಾಗವಾಗಿ, 2020 ಡಿಸೆಂಬರ್ ಹಾಗೂ 2021ರ ಏಪ್ರಿಲ್ ನಡುವೆ ಸ್ಪುಟಿಕ್ ಲೈಟ್ ಲಸಿಕೆಯ ಒಂದು ಡೋಸ್ ಹಾಕಿಸಿಕೊಂಡ 28 ದಿನಗಳ ಬಳಿಕ ನಡೆಸಿದ ಅಧ್ಯಯನದಲ್ಲಿ ಶೇಕಡಾ 79.4ರಷ್ಟು ಪರಿಣಾಮಕಾರಿ ಎಂಬುದು ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.