
ಪಿಟಿಐ
ವಾಷಿಂಗ್ಟನ್: ಷಿಕಾಗೋ ಮತ್ತು ಇತರ ನಗರಗಳಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸಿ ದರೋಡೆ ಮಾಡಿದ ಆರೋಪದಡಿ ಬಂಧಿತರಾಗಿರುವ ನಾಲ್ವರು ಭಾರತೀಯರು ಸೇರಿದಂತೆ ಆರು ಜನರಿಗೆ ಫೆಡರಲ್ ನ್ಯಾಯಾಲಯವು ಯು–ವೀಸಾಕ್ಕೆ ಅರ್ಜಿ ಸಲ್ಲಿಸಲು ಶುಕ್ರವಾರ ಅವಕಾಶ ಕಲ್ಪಿಸಿದೆ.
ಭಾರತೀಯರಾದ ಭೀಖಾಭಾಯಿ ಪಟೇಲ್(51), ನೀಲೇಶ್ ಪಟೇಲ್ (32), ರವಿನಾಬೆನ್ ಪಟೇಲ್ (23) ಮತ್ತು ರಜನಿ ಕುಮಾರ್ ಪಟೇಲ್ (32) ಜೊತೆಯಲ್ಲಿ ವಿದೇಶೀಯರಾದ ಪಾರ್ಥ್ ನಯೀ (26) ಮತ್ತು ಕೆವಾಂಗ್ ಯಂಗ್ (31) ಅವರ ಮೇಲೆ ವೀಸಾ ವಂಚನೆಗೆ ಸಂಚು ರೂಪಿಸಿದ ಆರೋಪ ಇತ್ತು. ಇವರಿಗೆ ಯು–ವೀಸಾವನ್ನು ಸಲ್ಲಿಸಬಹುದು ಎಂದು ಫೆಡರಲ್ ನ್ಯಾಯಾಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.