ADVERTISEMENT

ನೈಜೀರಿಯಾ: ಮಸೀದಿಗೆ ನುಗ್ಗಿ ಗುಂಡಿನ ದಾಳಿ–16 ಜನರ ಸಾವು

ಏಜೆನ್ಸೀಸ್
Published 10 ಡಿಸೆಂಬರ್ 2021, 19:43 IST
Last Updated 10 ಡಿಸೆಂಬರ್ 2021, 19:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಾಗೋಸ್‌ (ಎಪಿ): ಉತ್ತರ ನೈಜೀರಿಯಾದ ಬಾರೆ ಎಂಬ ಗ್ರಾಮದ ಮಸೀದಿ ಮೇಲೆ ಗುರುವಾರ ದಾಳಿ ಮಾಡಿದ ಬಂದೂಕುಧಾರಿಗಳು ಗುಂಡಿನ ಮಳೆ ಸುರಿಸಿ 16 ಜನರನ್ನು ಕೊಂದು, ಹಲವರನ್ನು ಅಪಹರಿಸಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಮೋಟಾರ್‌ ಸೈಕಲ್‌ಗಳಲ್ಲಿ ಬಂದ ಹತ್ತಾರು ದಾಳಿಕೋರರು ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದವರ ಮೇಲೆ ಕೆಲ ಗಂಟೆಗಳವರೆಗೆ ಗುಂಡಿನ ದಾಳಿ ನಡೆಸಿದ್ದಾರೆ.ಈ ದಾಳಿಯಲ್ಲಿ 16 ಜನರು ಮೃತಪಟ್ಟಿದ್ದಾರೆ. ದಾಳಿಕೋರರು ಎಷ್ಟು ಜನರನ್ನು ಅಪಹರಣ ಮಾಡಿದ್ದಾರೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT