ನವದೆಹಲಿ: ವಾಷಿಂಗ್ಟನ್‌ನಲ್ಲಿರುವ ಭಾರತ ರಾಯಭಾರ ಕಚೇರಿ ಮುಂಭಾಗದ ಗಾಂಧಿ ಪ್ರತಿಮೆ ಧ್ವಂಸಗೊಂಡ ಕುರಿತು ಗುರುವಾರ ಅಮೆರಿಕ ರಾಯಭಾರಿ ಕಿನ್ ಜಸ್ಟರ್ ಭಾರತದ ಕ್ಷಮೆ ಕೋರಿದ್ದಾರೆ.
ದುಷ್ಕರ್ಮಿಗಳು ಗಾಂಧಿ ಪ್ರತಿಮೆಯ ಮೇಲೆ ಬರಹಗಳನ್ನು ಗೀಚಿ, ಬಣ್ಣಗಳನ್ನು ಎರಚಿದ್ದಾರೆ. ಈ ಕುರಿತು ಭಾರತ ರಾಯಭಾರ ಕಚೇರಿಯು ಕೇಸು ದಾಖಲಿಸಲು ಮುಂದಾಗಿದೆ. ಘಟನೆಯು ಜೂನ್ 2ರ ತಡರಾತ್ರಿ ನಡೆದಿದೆ.
ಗಾಂಧಿ ಪ್ರತಿಮೆ ಧ್ವಂಸಗೊಂಡಿದ್ದಕ್ಕೆ ಕ್ಷಮೆ ಕೋರುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.