ADVERTISEMENT

'ಓಮಿಕ್ರಾನ್‌' ತಡೆಯಲು ಪ್ರಯಾಣ ನಿರ್ಬಂಧಿಸಿದ್ದು ಅನ್ಯಾಯವೆಂದ ದಕ್ಷಿಣ ಆಫ್ರಿಕಾ

ರಾಯಿಟರ್ಸ್
Published 27 ನವೆಂಬರ್ 2021, 6:41 IST
Last Updated 27 ನವೆಂಬರ್ 2021, 6:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಜೊಹಾನ್ಸ್‌ಬರ್ಗ್‌: ಓಮಿಕ್ರಾನ್‌ ಹೆಸರಿನ ಕೊರೊನಾ ವೈರಸ್‌ನ ಹೊಸ ತಳಿಯ ಪ್ರಸರಣೆ ತಡೆಯಲು ವಿಶ್ವದ ರಾಷ್ಟ್ರಗಳು ಹೇರುತ್ತಿರುವ ಪ್ರಯಾಣ ನಿಷೇಧವನ್ನು ದಕ್ಷಿಣ ಆಫ್ರಿಕಾ ತೀವ್ರವಾಗಿ ಟೀಕಿಸಿದೆ. ಇದು ಅತ್ಯಂತ ಕಠಿಣ, ಅವೈಜ್ಞಾನಿಕ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಳಿಗೆ ವಿರುದ್ಧವಾದದ್ದು ಎಂದು ಹೇಳಿದೆ.

ಒಂದಾದ ನಂತರ ಒಂದು ದೇಶವು ವಿಧಿಸುತ್ತಿರುವ ಪ್ರಯಾಣ ನಿಷೇಧವನ್ನು ಅಲ್ಲಿನ ಆರೋಗ್ಯ ಸಚಿವ ಜೋ ಫಾಹ್ಲಾ ಖಂಡಿಸಿದ್ದಾರೆ.

‘ಕೆಲವು ಪ್ರತಿಕ್ರಿಯೆಗಳು ನ್ಯಾಯಸಮ್ಮತವಲ್ಲ ಎಂದು ನಾವು ಭಾವಿಸಿದ್ದೇವೆ’ ಎಂದು ಜೋ ಫಾಹ್ಲಾ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಅಲ್ಲದೆ, ಕೆಲವರು ಬಲಿಪಶುಗಳನ್ನು ಹುಡುಕುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಆದರೆ, ಯಾರನ್ನೂ ಅವರು ಹೆಸರಿಸಲಿಲ್ಲ.

ADVERTISEMENT

ನ. 24ರಂದು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೋವಿಡ್‌ನ ಹೊಸ ತಳಿಯು ಆತಂಕಕಾರಿ ಮಾದರಿ ಎಂದು ವಿಶ್ವಸಂಸ್ಥೆ ಹೇಳಿದೆ. ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಏಕಾಏಕಿ ಆಗಿರುವ ಏರಿಕೆಗೆ ಇದೇ ತಳಿ ಕಾರಣವೆಂದು ಹೇಳಲಾಗುತ್ತಿದೆ. ಆದರೆ, ಈ ತಳಿಯು ಹಾಂಕಾಂಗ್‌, ಬೆಲ್ಜಿಯಂ, ಇಸ್ರೇಲ್‌, ಬೋಟ್ಸ್‌ವಾನಾಗಳಲ್ಲಿಯೂ ಕಂಡು ಬಂದಿದೆ.

ಆಸ್ಟ್ರಿಯಾ, ಕೆನಡಾ, ಫ್ರಾನ್ಸ್‌, ಜರ್ಮನಿ, ಇಟಲಿ, ನೆದರಲೆಂಡ್ಸ್‌ ಮತ್ತು ಅಮೆರಿಕ ದೇಶಗಳು ದಕ್ಷಿಣ ಆಫ್ರಿಕಾ ಮೇಲೆ ಪ್ರಯಾಣ ನಿಷೇಧ ಹೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.