ADVERTISEMENT

ದಕ್ಷಿಣ ಆಫ್ರಿಕಾ ಸಂಸತ್ ಕಟ್ಟಡದಲ್ಲಿ ಬೆಂಕಿ; ಅಧಿವೇಶನ ಸ್ಥಳ ಸಂಪೂರ್ಣ ನಾಶ

ಏಜೆನ್ಸೀಸ್
Published 2 ಜನವರಿ 2022, 16:17 IST
Last Updated 2 ಜನವರಿ 2022, 16:17 IST
ದಕ್ಷಿಣ ಆಫ್ರಿಕಾ ಸಂಸತ್ ಕಟ್ಟಡದಲ್ಲಿ ಅಗ್ನಿ ಅವಘಡ
ದಕ್ಷಿಣ ಆಫ್ರಿಕಾ ಸಂಸತ್ ಕಟ್ಟಡದಲ್ಲಿ ಅಗ್ನಿ ಅವಘಡ   

ಕೇಪ್ ಟೌನ್: ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿರುವ ಸಂಸತ್ ಭವನಕಟ್ಟಡದಲ್ಲಿ ಸಂಭವಿಸಿದ ಭಾರಿ ಬೆಂಕಿ ಅನಾಹುತದಲ್ಲಿ ಚುನಾಯಿತ ಸದಸ್ಯರು ಕುಳಿತುಕೊಳ್ಳುವ ನ್ಯಾಷನಲ್ಅಸ್ಲೆಂಬಿ (ಲೋಕಸಭೆ) ಸಂಪೂರ್ಣವಾಗಿ ಹೊತ್ತಿ ಉರಿದಿದೆ ಎಂದು ವಕ್ತಾರರು ಭಾನುವಾರ ತಿಳಿಸಿದ್ದಾರೆ.

ಚುನಾಯಿತ ಸದಸ್ಯರು ಕುಳಿತುಕೊಳ್ಲುವಅಧಿವೇಶನ ಸ್ಥಳ ಸಂಪೂರ್ಣವಾಗಿ ನಾಶವಾಗಿದೆ. ಬೆಂಕಿಯನ್ನು ನಂದಿಸುವ ಕಾರ್ಯ ಈಗಲೂ ಜಾರಿಯಲ್ಲಿದೆ ಎಂದು ಮೊಲೊಟೊ ಮೊಥಾಪೊ ತಿಳಿಸಿದ್ದಾರೆ.

ಈ ಐತಿಹಾಸಿಕ ಕಟ್ಟಡದಲ್ಲಿ ಅಪರೂಪದ ಪುಸ್ತಕಗಳನ್ನು ಸಂಗ್ರಹಿಸಿ ಇಡಲಾಗಿತ್ತು. ವರ್ಣಭೇದ ನೀತಿಯ ಯುಗದಲ್ಲಿ ಬಳಸಲಾದ ಪುರಾತನ ಆಫ್ರಿಕನ್ ರಾಷ್ಟ್ರಗೀತೆಯ ಮೂಲ ಪ್ರತಿ ಹಾನಿಗೊಳಗಾಗಿದೆ.

ADVERTISEMENT

ಅಗ್ನಿ ಅವಘಡ ಹಿಂದಿನ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಈಗಾಗಲೇ ತನಿಖೆ ಆರಂಭಿಸಲಾಗಿದ್ದು, ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್‌ ರಾಮಫೊಸಾ ತಿಳಿಸಿದ್ದಾರೆ.

ಸುಮಾರು 70ಕ್ಕೂ ಹೆಚ್ಚು ಅಗ್ನಿಶಾಮಕದಳ ಸಿಬ್ಬಂದಿ ಅಗ್ನಿ ನಂದಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಬೆಂಕಿಯಿಂದ ಹರಡಿರುವ ಹೊಗೆ ಮುಗಿಲೆತ್ತರಕ್ಕೆ ವ್ಯಾಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.