ADVERTISEMENT

ಉತ್ತರ ಕೊರಿಯಾದಿಂದ ಮತ್ತೆ ಕ್ರೂಸ್ ಕ್ಷಿಪಣಿ ಪರೀಕ್ಷೆ: ದ.ಕೊರಿಯಾ

ಏಜೆನ್ಸೀಸ್
Published 30 ಜನವರಿ 2024, 4:19 IST
Last Updated 30 ಜನವರಿ 2024, 4:19 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಸೋಲ್: ಪಶ್ಚಿಮ ಕರಾವಳಿಯ ಸಮುದ್ರದಲ್ಲಿ ಉತ್ತರ ಕೊರಿಯಾ ಮತ್ತೊಂದು ಕ್ರೂಸ್ ಕ್ಷಿಪಣಿಯ ಪರೀಕ್ಷೆ ನಡೆಸಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ.

ಕ್ರೂಸ್ ಕ್ಷಿಪಣಿ ಹಾರಿಸುತ್ತಿರುವುದನ್ನು ದಕ್ಷಿಣ ಕೊರಿಯಾದ ಮಿಲಿಟರಿ ಪತ್ತೆ ಹಚ್ಚಿದ್ದು, ಒಂದು ತಿಂಗಳೊಳಗೆ ನಡೆಸಿದ ಮೂರನೇ ಪರೀಕ್ಷೆ ಇದಾಗಿದೆ ಎಂದು ಹೇಳಿದೆ.

ADVERTISEMENT

ಕ್ರೂಸ್ ಕ್ಷಪಣಿ ಉಡಾವಣೆ ಮೇಲೆ ದಕ್ಷಿಣ ಕೊರಿಯಾ ಹಾಗೂ ಅಮೆರಿಕದ ಮಿಲಿಟರಿ ಸೂಕ್ಷ್ಮವಾಗಿ ನಿಗಾ ವಹಿಸಿದೆ ಎಂದು ಅದು ಹೇಳಿದೆ.

ಅಮೆರಿಕ, ದಕ್ಷಿಣ ಕೊರಿಯಾ ಹಾಗೂ ಜಪಾನ್‌ನೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಉತ್ತರ ಕೊರಿಯಾದಿಂದ ಶಸ್ತ್ರಾಸ್ತ್ರ ಪ್ರದರ್ಶನಗಳ ಸರಣಿ ಮುಂದುವರಿದಿದೆ.

ಉತ್ತರ ಕೊರಿಯಾ, ಜಲಾಂತರ್ಗಾಮಿ ನೌಕೆಯಿಂದ ಉಡಾವಣೆ ಮಾಡಲು ವಿನ್ಯಾಸಗೊಳಿಸಲಾದ ಕ್ರೂಸ್ ಕ್ಷಿಪಣಿಗಳನ್ನು ಜನವರಿ 24 ಹಾಗೂ 28ರಂದು ಸಹ ಪರೀಕ್ಷೆ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.