ADVERTISEMENT

ಹಿಮಪಾತ: 200 ಚಾರಣಿಗರ ರಕ್ಷಣೆ

ಏಜೆನ್ಸೀಸ್
Published 18 ಜನವರಿ 2020, 20:00 IST
Last Updated 18 ಜನವರಿ 2020, 20:00 IST

ಕಠ್ಮಂಡು: ಹಿಮಾಲಯದ ಅನ್ನಪೂರ್ಣ ಪರ್ವತದಲ್ಲಿ ಸಂಭವಿಸಿದ ಭಾರಿ ಹಿಮಪಾತದಲ್ಲಿ ಸಿಲುಕಿದ್ದ 200 ಚಾರಣಿಗರನ್ನು ರಕ್ಷಿಸಲಾಗಿದೆ ಎಂದು ನೇಪಾಳದ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕೊರಿಯಾದ ನಾಲ್ವರು ಮತ್ತು ನೇಪಾಳದ ಮೂವರು ಇನ್ನೂ ಪತ್ತೆಯಾಗಿಲ್ಲ. ಹೆಲಿಕಾಪ್ಟರ್‌ ಹಾರಾಟಕ್ಕೆ ಪೂರಕ ವಾತಾವರಣವಿದ್ದ ಕಾರಣ ಕಾರ್ಯಾಚರಣೆ ನಡೆಸಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ ದಕ್ಷಿಣ ಕೊರಿಯಾದ ತಂಡ ನೇಪಾಳಕ್ಕೆ ಬಂದಿದೆ.

2014ರಲ್ಲಿ ಇದೇ ಪ್ರದೇಶದಲ್ಲಿ ಭಾರಿ ಹಿಮಪಾತ ಸಂಭವಿಸಿ 40 ಜನಮೃತಪಟ್ಟಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.