ಲೀ ಜೇ ಮ್ಯುಂಗ್
ಸಿಯೋಲ್: ತಮ್ಮ ಐದು ವರ್ಷಗಳ ಅಧಿಕಾರದ ಅವಧಿಯಲ್ಲಿ ಉತ್ತರ ಕೊರಿಯಾದ ಜೊತೆ ಮಾತುಕತೆ ಪುನರಾರಂಭಿಸುವ ಮತ್ತು ಅಮೆರಿಕ ಹಾಗೂ ಜಪಾನ್ ಜೊತೆಗಿನ ತ್ರಿಪಕ್ಷೀಯ ಸಂಬಂಧ ವೃದ್ಧಿಗೆ ದಕ್ಷಿಣ ಕೊರಿಯಾದ ನೂತನ ಅಧ್ಯಕ್ಷ ಲೀ ಜೇ ಮ್ಯುಂಗ್ ಒಲವು ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಶಾಸನಸಭೆಯಲ್ಲಿ ಬುಧವಾರ ತಮ್ಮ ಚೊಚ್ಚಲ ಭಾಷಣ ಮಾಡಿದ ಅವರು, ‘ಉತ್ತರ ಕೊರಿಯಾದ ಪರಮಾಣು ಬೆದರಿಕ ಮತ್ತು ಮಿಲಿಟರಿ ಒತ್ತಡವನ್ನು ದಕ್ಷಿಣ ಕೊರಿಯಾ– ಅಮೆರಿಕ ಸೇನಾ ಮೈತ್ರಿಕೂಟವು ಪ್ರಬಲವಾಗಿ ತಡೆಯಲಿದೆ. ಆದರೆ, ಉತ್ತರ ಕೊರಿಯಾದ ಜೊತೆ ಮಾತುಕತೆಗೆ ನಾನು ಮುಕ್ತ ಮನಸ್ಸು ಹೊಂದಿದ್ದು, ಮಾತುಕತೆ ಮತ್ತು ಸಹಕಾರದ ಮೂಲಕ ಕೊರಿಯಾ ದ್ವೀಪದಲ್ಲಿ ಶಾಂತಿ ಸ್ಥಾಪಿಸಲು ಬಯಸುತ್ತೇನೆ’ ಎಂದರು.
ನೆರೆಯ ರಾಷ್ಟ್ರಗಳೊಂದಿಗೆ ವ್ಯಾವಹಾರಿಕ ರಾಜತಾಂತ್ರಿಕ ಪ್ರಯತ್ನಗಳ ಮೂಲಕ ಸಿಯೋಲ್– ವಾಷಿಂಗ್ಟನ್– ಟೋಕಿಯೋ ಮಧ್ಯೆ ತ್ರಿಪಕ್ಷೀಯ ಸಹಕಾರ ಸ್ಥಾಪಿಸಲು ಶ್ರಮಿಸುವುದಾಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.