ADVERTISEMENT

15 ಗಂಟೆಯಲ್ಲಿ ನಾಲ್ವರು ಗಗನಯಾನಿಗಳು ಐಎಸ್‌ಎಸ್‌ಗೆ: ಸ್ಪೇಸ್‌ಎಕ್ಸ್ ಸಾಧನೆ

ಪಿಟಿಐ
Published 2 ಆಗಸ್ಟ್ 2025, 14:26 IST
Last Updated 2 ಆಗಸ್ಟ್ 2025, 14:26 IST
ಅಮೆರಿಕದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ‘ಫಾಲ್ಕನ್‌– 9’ ರಾಕೆಟ್‌ ನಾಲ್ವರು ಗಗನಯಾನಿಗಳಿದ್ದ ಬಾಹ್ಯಾಕಾಶ ಕೋಶ ಹೊತ್ತು ನಭಕ್ಕೆ ಚಿಮ್ಮಿತು  ಎಪಿ/ಪಿಟಿಐ ಚಿತ್ರ
ಅಮೆರಿಕದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ‘ಫಾಲ್ಕನ್‌– 9’ ರಾಕೆಟ್‌ ನಾಲ್ವರು ಗಗನಯಾನಿಗಳಿದ್ದ ಬಾಹ್ಯಾಕಾಶ ಕೋಶ ಹೊತ್ತು ನಭಕ್ಕೆ ಚಿಮ್ಮಿತು  ಎಪಿ/ಪಿಟಿಐ ಚಿತ್ರ   

ಕೇಪ್‌ ಕೆನವೆರಲ್: ಅಮೆರಿಕದ ಸ್ಪೇಸ್‌ಎಕ್ಸ್‌ ನಾಲ್ವರು ಗಗನಯಾನಿಗಳನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ಶನಿವಾರ ತಲುಪಿಸಿದೆ. 

ಕೇವಲ 15 ಗಂಟೆಗಳಲ್ಲಿ ಈ ಬಾಹ್ಯಾಕಾಶ ಯಾನವನ್ನು ಪೂರ್ಣಗೊಳಿಸಿರುವುದು ಗಮನಾರ್ಹ. 

ನಾಸಾದ ಜೆನಾ ಕಾರ್ಡ್‌ಮ್ಯಾನ್‌, ಮೈಕ್ ಫಿನ್ಕೆ, ಜಪಾನ್‌ನ ಕಿಮಿಯಾ ಯುಯಿ ಹಾಗೂ ರಷ್ಯಾದ ಒಲೆಗ್‌ ಪ್ಲಾಟೊನೋವ್‌ ಅವರು ಇದ್ದ ಬಾಹ್ಯಾಕಾಶ ಕೋಶ ಹೊತ್ತ ರಾಕೆಟ್ ‘ಫಾಲ್ಕನ್‌–9’ ಅನ್ನು, ಇಲ್ಲಿನ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡ್ಡಯನ ಮಾಡಲಾಯಿತು.

ADVERTISEMENT

ಈ ನಾಲ್ವರು ಗಗನಯಾನಿಗಳು ಐಎಸ್‌ಎಸ್‌ನಲ್ಲಿ ಆರು ತಿಂಗಳು ಇರುವರು. ಕಳೆದ ಮಾರ್ಚ್‌ನಿಂದ ಐಎಸ್‌ಎಸ್‌ನಲ್ಲಿ ಇರುವ ನಾಲ್ವರು ಗಗನಯಾನಿಗಳನ್ನು ಸ್ಪೇಸ್‌ಎಕ್ಸ್‌ನ ಬಾಹ್ಯಾಕಾಶ ಕೋಶ ಬುಧವಾರದ ವೇಳೆ ಭೂಮಿಗೆ ಮರಳಿ ಕರೆದುಕೊಂಡು ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.