ಎಪಿ
ವಾಷಿಂಗ್ಟನ್: ಇಲಾನ್ ಮಸ್ಕ್ ಒಡೆತನದ ‘ಸ್ಪೇಸ್‌ಎಕ್ಸ್’ ಸಿದ್ಧಪಡಿಸಿರುವ 11ನೇ ಸ್ಟಾರ್‌ಶಿಪ್ ರಾಕೆಟ್‌ನ ಪ್ರಾಯೋಗಿಕ ಉಡಾವಣೆಯನ್ನು ಯಶಸ್ವಿಯಾಗಿ ಸೋಮವಾರ ನಡೆಸಲಾಯಿತು. ಈ ಹಿಂದಿನಂತೆ ಉಪಗ್ರಹಗಳ ಪ್ರತಿಕೃತಿಗಳನ್ನು ಅಂತರಿಕ್ಷದಲ್ಲಿ ಯಶಸ್ವಿಯಾಗಿ ಬಿಡುಗಡೆ ಮಾಡಿತು.
ಈವರೆಗೆ ನಿರ್ಮಿಸಲಾದ ಅತಿ ದೊಡ್ಡ ಮತ್ತು ಅತ್ಯಂತ ಶಕ್ತಿಶಾಲಿ ರಾಕೆಟ್ ‘ಸ್ಟಾರ್‌ಶಿಪ್’. ಟೆಕ್ಸಾಸ್‌ನಿಂದ ಈ ರಾಕೆಟ್ ಅನ್ನು ಉಡಾವಣೆ ಮಾಡಲಾಯಿತು. ಯೋಜನೆಯಂತೆಯೇ ಬಾಹ್ಯಾಕಾಶ ನೌಕೆಯ ಬೂಸ್ಟರ್ ಮೆಕ್ಸಿಕೊ ಕೊಲ್ಲಿಯಲ್ಲಿ ಯಶಸ್ವಿಯಾಗಿ ಇಳಿಯಿತು. ನೌಕೆಯು ಅಂತರಿಕ್ಷದಲ್ಲಿ ಕೆಲಹೊತ್ತು ಸುತ್ತಿ ಬಳಿಕ ಹಿಂದೂ ಮಹಾಸಾಗರದಲ್ಲಿ ಬಿತ್ತು.
ಮಾನವರನ್ನು ಮಂಗಳನ ಅಂಗಳಕ್ಕೆ ಕಳುಹಿಸುವ ಉದ್ದೇಶದಿಂದ ‘ಸ್ಪೇಸ್ಎಕ್ಸ್’ ಸಂಸ್ಥೆಯು ಸ್ಟಾರ್‌ಶಿಪ್ ರಾಕೆಟ್ ಅನ್ನು ಅಭಿವೃದ್ಧಿಪಡಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.