
ಅಡಮುಜ್: ಸ್ಪೇನ್‌ನ ಅಡಮುಜ್ ನಗರದ ಬಳಿ ಎರಡು ರೈಲುಗಳು ಡಿಕ್ಕಿಯಾಗಿ, 39 ಜನರು ಸಾವಿಗೀಡಾಗಿದ್ದಾರೆ. ಭಾನುವಾರ ರಾತ್ರಿ ಅಪಘಾತ ಸಂಭವಿಸಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಲಾಗದಿಂದ ಮ್ಯಾಡ್ರಿಡ್‌ಗೆ ತೆರಳುತ್ತಿದ್ದ ರೈಲಿನಲ್ಲಿ 300 ಜನ ಪ್ರಯಾಣಿಕರಿದ್ದರು. ಈ ರೈಲು ರಾತ್ರಿ 7.45ಕ್ಕೆ ಹಳಿ ತಪ್ಪಿತು. ಈ ವೇಳೆ ಮ್ಯಾಡ್ರಿಡ್‌ನಿಂದ ಹುಯೆಲ್ವಾಗೆ ಸಂಚರಿಸುತ್ತಿದ್ದ ಇನ್ನೊಂದು ರೈಲು, ಹಳಿ ತಪ್ಪಿದ ರೈಲಿಗೆ ಡಿಕ್ಕಿಯಾಗಿದೆ. ಇದರಲ್ಲಿ 200 ಮಂದಿ ಪ್ರಯಾಣಿಕರಿದ್ದರು.
ಘಟನೆಯಲ್ಲಿ 159 ಜನರು ಗಾಯಗೊಂಡಿದ್ದು, ಈ ಪೈಕಿ 29 ಮಂದಿಯ ಸ್ಥಿತಿ ಗಂಭೀರವಾಗಿದೆ. ಎಲ್ಲರಿಗೂ ಚಿಕಿತ್ಸೆ ಮುಂದುವರಿದಿದೆ. ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.