ADVERTISEMENT

ಸ್ಪ್ಯಾನಿಷ್‌ನ ಖ್ಯಾತ ವಸ್ತ್ರ ವಿನ್ಯಾಸಕ ಪ್ಯಾಕೊ ರಾಬನ್ನೆ ನಿಧನ

ಏಜೆನ್ಸೀಸ್
Published 4 ಫೆಬ್ರುವರಿ 2023, 2:17 IST
Last Updated 4 ಫೆಬ್ರುವರಿ 2023, 2:17 IST
   

ಮ್ಯಾಡ್ರಿಡ್: ತಮ್ಮ ವಿಲಕ್ಷಣ ಉಡುಪು ವಿನ್ಯಾಸಗಳಿಗೆ ಹೆಸರುವಾಸಿಯಾಗಿದ್ದ ಸ್ಪ್ಯಾನಿಷ್ ಫ್ಯಾಶನ್ ಡಿಸೈನರ್ ಪ್ಯಾಕೊ ರಾಬನ್ನೆ ಅವರು ಶುಕ್ರವಾರ ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದರು.

'ತಮ್ಮ ವಿಶಿಷ್ಟ ದೃಷ್ಟಿಕೋನದಿಂದ ಫ್ಯಾಶನ್ ಲೋಕಕ್ಕೆ ತಲೆಮಾರುಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರ ಪರಂಪರೆಯು ದೀರ್ಘಕಾಲ ಉಳಿಯುತ್ತದೆ' ಎಂದು ರಾಬನ್ನೆ ಅವರ ಮೂಲ ಕಂಪನಿಯು ಎಎಫ್‌ಪಿಗೆ ತಿಳಿಸಿದೆ.

1960ರ ದಶಕದ ಫ್ಯಾಷನ್ ಯುಗದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. ಲೋಹ ಮತ್ತು ಇತರ ಅಸಂಭವ ವಸ್ತುಗಳನ್ನು ಬಳಸಿ ಉಡುಪು ವಿನ್ಯಾಸ ಮಾಡುವುದರಲ್ಲಿ ರಾಬನ್ನೆ ಹೆಸರುವಾಸಿಯಾಗಿದ್ದರು.

ADVERTISEMENT

1968ರಲ್ಲಿ ಪುಯಿಗ್(ಸ್ಪ್ಯಾನಿಷ್‌ನ ಫ್ಯಾಶನ್ ಮತ್ತು ಸುಗಂಧ ದ್ರವ್ಯ ಕಂಪನಿ) ಜೊತೆ ಸೇರಿಕೊಂಡು ತಮ್ಮದೇ ಹೆಸರಿನ ಸುಗಂಧ ದ್ರವ್ಯದ ಬ್ರ್ಯಾಂಡ್ ಅನ್ನು ಬಿಡುಗಡೆ ಮಾಡಿದರು. ಈಗಲೂ ಇಂದು ಜಾಗತಿಕವಾಗಿ ಜನಪ್ರಿಯ ಸುಗಂಧ ದ್ರವ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.