ADVERTISEMENT

ಸೋಂಕುನಿವಾರಕಗಳ ಸಿಂಪಡಣೆಯಿಂದ ಕೊರೊನಾ ವೈರಸ್ ಕೊಲ್ಲುವುದು ಅಸಾಧ್ಯ: ಡಬ್ಲ್ಯುಎಚ್‌ಒ

ಏಜೆನ್ಸೀಸ್
Published 17 ಮೇ 2020, 7:25 IST
Last Updated 17 ಮೇ 2020, 7:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಿನೆವಾ: ಕೆಲವು ದೇಶಗಳಲ್ಲಿ ಅಭ್ಯಾಸ ಮಾಡಿಕೊಂಡಿರುವಂತೆ, ಸೋಂಕುನಿವಾರಕವನ್ನು ಬೀದಿಗಳಲ್ಲಿ ಸಿಂಪಡಿಸುವುದರಿಂದ ಕೊರೊನಾ ವೈರಸ್‌ನಿಂದ ಮುಕ್ತಿ ಪಡೆಯಲು ಸಾಧ್ಯವಿಲ್ಲ. ಬದಲಿಗೆ ಅದು ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಸಿದೆ.

ವೈರಸ್‌ನ್ನು ನಿವಾರಿಸಲೆಂದುಸ್ವಚ್ಛಗೊಳಿಸುವ ವೇಳೆ ಸೋಂಕುನಿವಾರಕವನ್ನು ಸಿಂಪಡಿಸುವುದು ಪರಿಣಾಮಕಾರಿಯಾಗಿರುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದೆ.

'ಕೋವಿಡ್-19 ಅಥವಾ ಇತರ ರೋಗಕಾರಕಗಳನ್ನು ಕೊಲ್ಲಲು ಬೀದಿಗಳು ಅಥವಾ ಮಾರುಕಟ್ಟೆಯಂತಹಹೊರಾಂಗಣ ಪ್ರದೇಶಗಳಲ್ಲಿ ಸೋಂಕು ನಿವಾರಕಗಳನ್ನು ಸಿಂಪಡಿಸಲು ಶಿಫಾರಸು ಮಾಡುವುದಿಲ್ಲ. ಏಕೆಂದರೆ, ಸೋಂಕು ನಿವಾರಕವನ್ನು ಸಿಂಪಡಿಸಿದ ಬಳಿಕ ಅಲ್ಲಿರುವ ಕೊಳಕು ಮತ್ತು ಇತರೆ ಅವಶೇಷಗಳು ಸೋಂಕುನಿವಾರಕವೇ ನಿಷ್ಕ್ರಿಯಗೊಳ್ಳುವಂತೆ ಮಾಡುತ್ತವೆ'.

ADVERTISEMENT

'ವೈರಸ್ ಅನ್ನು ನಾಶಪಡಿಸಲು ಬೇಕಿರುವ ಅವಧಿವರೆಗೆಎಲ್ಲ ಜಾಗದಲ್ಲಿಯೂಸಮರ್ಪಕವಾಗಿರಾಸಾಯನಿಕ ಸಿಂಪಡಿಸುವಿಕೆಯು ಹರಡುವಸಾಧ್ಯತೆಯಿಲ್ಲ. ಬೀದಿಗಳು ಮತ್ತು ಪಾದಚಾರಿ ಮಾರ್ಗಗಳು ಸೋಂಕಿನ ಮೂಲಗಳಾಗಿಲ್ಲದಿರುವುದರಿಂದಾಗಿಹೊರಗಡೆ ಸೋಂಕುನಿವಾರಕಗಳನ್ನು ಸಿಂಪಡಿಸುವುದು ಕೂಡ ಮಾನವನ ಆರೋಗ್ಯಕ್ಕೆ ಹಾನಿಕಾರಕ'ಎಂದು ಹೇಳಿದೆ.

'ಯಾವುದೇ ವ್ಯಕ್ತಿಯ ಮೇಲೆ ಸೋಂಕು ನಿವಾರಕ ಸಿಂಪಡಿಸುವುದನ್ನು ಶಿಫಾರಸು ಮಾಡುವುದಿಲ್ಲ.ಸೋಂಕುನಿವಾರಕ ಸಿಂಪಡಣೆಯುದೈಹಿಕ ಮತ್ತು ಮಾನಸಿಕವಾಗಿಯೂ ಹಾನಿಯನ್ನುಂಟು ಮಾಡಬಹುದು. ಆದರೆ ಸೋಂಕಿತ ವ್ಯಕ್ತಿಯ ಸಂಪರ್ಕದ ಮೂಲಕ ವೈರಸ್ ಹರಡುವ ಸಾಮರ್ಥ್ಯವನ್ನು ಕಡಿಮೆ ಮಾಡುವುದಿಲ್ಲ'ಎಂದು ಒತ್ತಿ ಹೇಳಿದೆ.

ಜನರ ಮೇಲೆ ಕ್ಲೋರಿನ್ ಅಥವಾ ಇತರ ವಿಷಕಾರಿ ರಾಸಾಯನಿಕಗಳನ್ನು ಸಿಂಪಡಿಸುವುದರಿಂದ ಕಣ್ಣು ಮತ್ತು ಚರ್ಮದ ತೊಂದರೆ,ಬ್ರಾಂಕೋಸ್ಪಾಸ್ಮ್ ಮತ್ತು ಜಠರ-ಕರುಳಿನ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಒಂದು ವೇಳೆ ಸೋಂಕು ನಿವಾರಕಗಳನ್ನು ಸಿಂಪಡಿಸಲೇಬೇಕಿದ್ದರೆ, ಸೋಂಕು ನಿವಾರಕದಲ್ಲಿ ನೆನೆಸಿದ ಬಟ್ಟೆಯಿಂದ ಆ ಪ್ರದೇಶವನ್ನು ಸ್ವಚ್ಛಗೊಳಿಸಬೇಕು ಎಂದು ಅದು ಹೇಳುತ್ತದೆ.

ಕಳೆದ ಡಿಸೆಂಬರ್‌ನಲ್ಲಿ ಚೀನಾದಿಂದ ಹಬ್ಬಿದ ಕೋವಿಡ್-19 ಸಾಂಕ್ರಾಮಿಕದಿಂದಾಗಿ ವಿಶ್ವದಾದ್ಯಂತ ಇದುವರೆಗೂ 3 ಲಕ್ಷಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.