ADVERTISEMENT

ಶ್ರೀಲಂಕಾ ಸಂಸತ್ತಿನಲ್ಲಿ ಇಮ್ರಾನ್ ಖಾನ್ ಭಾಷಣ ರದ್ದು

ಪಿಟಿಐ
Published 18 ಫೆಬ್ರುವರಿ 2021, 9:08 IST
Last Updated 18 ಫೆಬ್ರುವರಿ 2021, 9:08 IST
ಪಾಕ್ ಪ್ರಧಾನಿ ಇಮ್ರಾನ್ ಖಾನ್ – ರಾಯಿಟರ್ಸ್ ಚಿತ್ರ
ಪಾಕ್ ಪ್ರಧಾನಿ ಇಮ್ರಾನ್ ಖಾನ್ – ರಾಯಿಟರ್ಸ್ ಚಿತ್ರ   

ಕೊಲಂಬೊ/ಇಸ್ಲಮಾಬಾದ್‌: ‘ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಮುಂದಿನ ತಮ್ಮ ಕೊಲಂಬೊ ಭೇಟಿಯಲ್ಲಿ ಶ್ರೀಲಂಕಾದ ಸಂಸತ್ತಿನಲ್ಲಿ ಮಾಡಬೇಕಿದ್ದ ಭಾಷಣವನ್ನು ಅಲ್ಲಿನ ಸರ್ಕಾರ ರದ್ದುಗೊಳಿಸಿದೆ‘ ಎಂದು ಮಾಧ್ಯಮಗಳು ವರದಿ ಮಾಡಿವೆ.

‘ಈಗಾಗಲೇ ನಿಗದಿಯಾಗಿರುವಂತೆ ಪಾಕಿಸ್ತಾನ ಪ್ರಧಾನಿಯವರ ಶ್ರೀಲಂಕಾ ಪ್ರವಾಸ ಮುಂದುವರಿಯಲಿದೆ. ಆದರೆ, ಅವರ ಉದ್ದೇಶಿತ ಸಂಸತ್ತಿನ ಭೇಟಿಯನ್ನು ರದ್ದುಗೊಳಿಸಲಾಗಿದೆ‘ ಎಂದು ವಿದೇಶಾಂಗ ಸಚಿವಾಲಯ ಸಂಸತ್ತಿನ ಅಧಿಕಾರಿಗಳಿಗೆ ತಿಳಿಸಿದೆ.

‘ಕೋವಿಡ್‌ ಹಿನ್ನೆಲೆಯಲ್ಲಿ ಸ್ಪೀಕರ್ ಮಹಿಂದಾ ಯಪ ಅಭಯ್‌ವರ್ದೆನಾ ಅವರ ಮನವಿ ಮೇರೆಗೆ ಇಮ್ರಾನ್ ಖಾನ್ ಅವರ ಭಾಷಣವನ್ನು ರದ್ದುಗೊಳಿಸಲಾಯಿತು‘ ಎಂದು ವಿದೇಶಾಂಗ ಸಚಿವ ಜಯಂತ್ ಕೊಲೊಂಬೇಜ್‌ ಹೇಳಿರುವುದಾಗಿ ಶ್ರೀಲಂಕಾದ ‘ಡೈಲಿ ಎಕ್ಸ್‌ಪ್ರೆಸ್‌’ ಪತ್ರಿಕೆ ವರದಿ ಮಾಡಿದೆ.

ADVERTISEMENT

ಇಮ್ರಾನ್‌ ಖಾನ್ ಅವರ ಎರಡು ದಿನಗಳ ಲಂಕಾ ಪ್ರವಾಸಇದೇ 22 ರಿಂದ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.