ಕೊಲಂಬೊ: ಶ್ರೀಲಂಕಾದಲ್ಲಿ ಇದೇ ಮೊದಲ ಬಾರಿ ಕೋವಿಡ್–19ನ ‘ಡೆಲ್ಟಾ’ ರೂಪಾಂತರ ತಳಿ ಪತ್ತೆಯಾಗಿದೆ.
‘ಕೊಲಂಬೊ ಉಪನಗರದ ಡೆಮಾಟಗೊಡೊದಲ್ಲಿ ಸಂಗ್ರಹಿಸಿದ್ದ ಮಾದರಿಗಳಲ್ಲಿ ‘ಡೆಲ್ಟಾ’ ತಳಿ ಪತ್ತೆಯಾಗಿದೆ. ಇಲ್ಲಿ ಎಂಟು ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಇವುಗಳಲ್ಲಿನ ಐದರಲ್ಲಿ ‘ಡೆಲ್ಟಾ’ ತಳಿ ಇರುವುದು ದೃಢಪಟ್ಟಿದೆ’ ಎಂದು ಶ್ರೀ ಜಯವರ್ಧನಪುರಾ ವಿಶ್ವವಿದ್ಯಾಲಯದ ಚಂದಿಮಾ ಜೀವಂದಾರಾ ತಿಳಿಸಿದ್ದಾರೆ.
‘ನಾವು ವಿವಿಧ ರೂಪಾಂತರ ತಳಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದೇವೆ. ಪಿಸಿಆರ್ ಪರೀಕ್ಷೆಗಳ ಮೂಲಕ ನಿಗಾವಹಿಸಲಾಗಿದೆ’ ಎಂದು ಅವರು ವಿವರಿಸಿದ್ದಾರೆ.
ಭಾರತದಲ್ಲಿ ಮೊದಲ ‘ಡೆಲ್ಟಾ’ ತಳಿ ಪತ್ತೆಯಾಗಿತ್ತು. ಇದು ತೀವ್ರ ಸ್ವರೂಪದ್ದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.