ADVERTISEMENT

ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಾಸಿಲ್‌ ರಾಜಪ‍ಕ್ಸ

ಪಿಟಿಐ
Published 9 ಜೂನ್ 2022, 14:44 IST
Last Updated 9 ಜೂನ್ 2022, 14:44 IST
ಬಸಿಲ್‌ ರಾಜಪಕ್ಸ
ಬಸಿಲ್‌ ರಾಜಪಕ್ಸ   

ಕೊಲಂಬೊ: ಶ್ರೀಲಂಕಾದ ಮಾಜಿ ಹಣಕಾಸು ಸಚಿವ ಹಾಗೂ ಅಧ್ಯಕ್ಷ ಗೋಟಬಯ ರಾಜಪಕ್ಸ ಸಹೋದರ ಬಾಸಿಲ್‌ ರಾಜಪಕ್ಸ ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶ್ರೀಲಂಕಾ ಪೊದುಜನ ಪೆರಮುಣ ಪಕ್ಷವು ಸೂಕ್ತ ಅಭ್ಯರ್ಥಿಯ ನಾಮ ನಿರ್ದೇಶನ ಮಾಡಲಿ ಎಂದು ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ’ ಎಂದು ಹೇಳಿದರು.

ಎರಡು ರಾಷ್ಟ್ರಗಳ ಪೌರತ್ವ ಹೊಂದಿರುವವರು ಸಂಸದರಾಗುವಂತಿಲ್ಲ ಎಂಬ ಅಂಶವನ್ನು ಉದ್ದೇಶಿತ 21ನೇ ತಿದ್ದುಪಡಿ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ. ನೀವು ಅಮೆರಿಕ ಹಾಗೂ ಶ್ರೀಲಂಕಾದ ಪೌರತ್ವ ಹೊಂದಿರುವುದರಿಂದ ರಾಜೀನಾಮೆ ನೀಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಆ ರೀತಿ ಏನೂ ಇಲ್ಲ. ಹಣಕಾಸು ಬಿಕ್ಕಟ್ಟಿಗೆ ನಾನು ಕಾರಣನೆಂದು ಆರೋಪ ಮಾಡುತ್ತಿರುವುದು’ ಸರಿಯಲ್ಲ ಎಂದರು.

ADVERTISEMENT

ಬಾಸಿಲ್‌ ಅವರು ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಅವರ ತಮ್ಮ.ಶ್ರೀಲಂಕಾದಲ್ಲಿ ತೀವ್ರಗೊಂಡ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಲ್ಲಿನ ನಾಗರಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಗೋಟಬಯ, ಮಹಿಂದಾ ಹಾಗೂ ಬಾಸಿಲ್‌ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದರು. ಹೀಗಾಗಿ ಕಳೆದ ತಿಂಗಳು ಮಹಿಂದಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಬಾಸಿಲ್‌ ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.