ADVERTISEMENT

ಶ್ರೀಲಂಕಾ: ತುರ್ತುಪರಿಸ್ಥಿತಿ ಮುಂದುವರಿಕೆ

ಏಜೆನ್ಸೀಸ್
Published 22 ಜೂನ್ 2019, 20:00 IST
Last Updated 22 ಜೂನ್ 2019, 20:00 IST
ಮೈತ್ರಿಪಾಲಾ ಸಿರಿಸೇನ
ಮೈತ್ರಿಪಾಲಾ ಸಿರಿಸೇನ   

ಕೊಲೊಂಬೊ: ಶ್ರೀಲಂಕಾದಲ್ಲಿ ಜಾರಿಯಲ್ಲಿದ್ದ ತುರ್ತುಪರಿಸ್ಥಿತಿಯನ್ನು ಮುಂದುವರೆಸಲಾಗುವುದು ಎಂದು ಅಧ್ಯಕ್ಷ್ಯ ಮೈತ್ರಿಪಾಲಾ ಸಿರಿಸೇನ ಶನಿವಾರ ಹೇಳಿದ್ದಾರೆ.

ಈಸ್ಟರ್‌ ಭಾನುವಾರದಂದು ನಡೆದ ದಾಳಿಯ ನಂತರ ಜಾರಿಮಾಡಲಾಗಿದ್ದ ಕಠಿಣ ಕಾನೂನುಗಳನ್ನು ಸಡಿಲಿಸಲಾಗುವುದು ಎಂದು ಅಧ್ಯಕ್ಷ ಸಿರಿಸೇನಾ ಅವರು ಜನತೆಗೆ ಭರವಸೆ ನೀಡಿದ್ದರು. ಆದರೆ, ಅವರು ತಮ್ಮ ನಿರ್ಧಾರವನ್ನು ಹಿಂಪಡೆದು ತುರ್ತುಪರಿಸ್ಥಿತಿಯನ್ನು ಮುಂದುವರೆಸಿದ್ದಾರೆ.

‘ಭದ್ರತಾ ಪರಿಸ್ಥಿತಿಯು ಶೇ 99ರಷ್ಟು ಸಹಜ ಸ್ಥಿತಿಗೆ ಬರುತ್ತಿದೆ. ಜೂನ್‌ 22ಕ್ಕೆ ತುರ್ತುಪರಿಸ್ಥಿತಿಯನ್ನು ಹಿಂಪಡೆಯಲಾಗುವುದು’ ಎಂದು ಸಿರಿಸೇನಾ ಮೇ ತಿಂಗಳಲ್ಲಿ ಹೇಳಿದ್ದರು.

ADVERTISEMENT

ಆರೋಪಿಗಳ ಬಂಧನ: ಈಸ್ಟರ್‌ ಭಾನುವಾರದಂದು ದಾಳಿ ನಡೆಸಿದ್ದ ಉಗ್ರರನ್ನು ಬಂಧಿಸಿರುವುದಾಗಿ ಪ್ರಧಾನಿ ವಿಕ್ರಮ ಸಿಂಘೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.