ಅನುರಕುಮಾರ ದಿಸ್ಸನಾಯಕೆ, ಶ್ರೀಲಂಕಾ ಅಧ್ಯಕ್ಷ
– ರಾಯಿಟರ್ಸ್ ಚಿತ್ರ
ಕೊಲಂಬೊ: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಸಚಿವರಿಗೆ ನೀಡಲಾಗುತ್ತಿದ್ದ ಸೌಲಭ್ಯಗಳಿಗೆ ಕತ್ತರಿ ಹಾಕಿದೆ.
ಈ ಬಗ್ಗೆ ಅಧ್ಯಕ್ಷ ಅನುರಕುಮಾರ ದಿಸ್ಸನಾಯಕೆ ಅವರು ಗುರುವಾರ ಸುತ್ತೋಲೆ ಹೊರಡಿಸಿದ್ದು, ಸಚಿವರು ಹಾಗೂ ಸಹಾಯಕ ಸಚಿವರು ಎರಡಕ್ಕಿಂತ ಹೆಚ್ಚಿನ ಸರ್ಕಾರಿ ವಾಹನ ಬಳಸುವ ಹಾಗಿಲ್ಲ ಎಂದು ಹೇಳಿದ್ದಾರೆ.
ಇಂಧನ ಭತ್ಯೆ, ಕಚೇರಿ ಖರ್ಚಿನ ಭತ್ಯೆ, ಮನೆ ಹಾಗೂ ದೂರವಾಣಿ ವೆಚ್ಚಕ್ಕೂ ಕಡಿವಾಣ ಹಾಕಲಾಗಿದೆ.
ಸಚಿವರ ಸಿಬ್ಬಂದಿ ಸಂಖ್ಯೆ15 ಹಾಗೂ ಸಹಾಯಕ ಸಚಿವರ ಸಿಬ್ಬಂದಿ ಸಂಖ್ಯೆಯನ್ನು 12ಕ್ಕೆ ಸೀಮಿತಗೊಳಿಸಲಾಗಿದೆ. ಕುಟುಂಬಸ್ಥರನ್ನು ಖಾಸಗಿ ಕಾರ್ಯದರ್ಶಿಯಾಗಿ, ಮಾಧ್ಯಮ ಕಾರ್ಯದರ್ಶಿಯಾಗಿ ಅಥವಾ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ನೇಮಿಸಿಕೊಳ್ಳಕೂಡದು ಎಂದು ತಿಳಿಸಲಾಗಿದೆ.
ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರು ಅಧಿಕೃತ ನಿವಾಸ ತೊರೆಯುವಂತೆ ಮತ್ತು ವೈಯಕ್ತಿಕ ಭದ್ರತೆಯನ್ನು ತ್ಯಜಿಸುವಂತೆ ಒತ್ತಡ ಹೇರಿರುವ ಕುರಿತು ನಡೆಯುತ್ತಿರುವ ಚರ್ಚೆಯ ನಡುವೆ ಈ ನಿಯಮಗಳು ಬಂದಿವೆ.
ಅಧಿಕಾರ ಕಳೆದುಕೊಂಡರೂ ರಾಜಪಕ್ಸೆ ಅವರು ಇನ್ನೂ ಅಧಿಕೃತ ನಿವಾಸವನ್ನು ತೊರೆದಿಲ್ಲ.
ರಾಜಪಕ್ಸೆ ಅವರಿಗೆ 300ಕ್ಕೂ ಅಧಿಕ ಸಿಬ್ಬಂದಿ ಭದ್ರತೆ ನೀಡಿದ್ದರು, ಅದನ್ನು ಡಿಸೆಂಬರ್‌ನಲ್ಲಿ ಕೇವಲ 60 ಕ್ಕೆ ಇಳಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.