ADVERTISEMENT

ಲಂಕಾದ ಉಪ ಸ್ಪೀಕರ್ ಚುನಾವಣೆಯಲ್ಲಿ ರಾಜಪಕ್ಸ ಬೆಂಬಲಿತ ಅಭ್ಯರ್ಥಿಗೆ ಜಯ

ಪಿಟಿಐ
Published 5 ಮೇ 2022, 12:38 IST
Last Updated 5 ಮೇ 2022, 12:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಲಂಬೊ: ಶ್ರೀಲಂಕಾ ಸರ್ಕಾರದ ಆಡಳಿತದ ಚುಕ್ಕಾಣಿ ಹಿಡಿದ ರಾಜಪಕ್ಸ ಕುಟುಂಬವು ಉಪ ಸ್ಪೀಕರ್ ಸ್ಥಾನಕ್ಕೆ ನಡೆದ ಗೋಪ್ಯ ಮತದಾನದಲ್ಲಿ ತಮ್ಮ ಬೆಂಬಲಿತ ನಾಮನಿರ್ದೇಶಿತ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಈ ಮೂಲಕ ಪ್ರತಿಪಕ್ಷಗಳು ಒಗ್ಗೂಡಿ ಹಾಕಿದ್ದ ಅಭ್ಯರ್ಥಿಯನ್ನು ರಾಜಪಕ್ಸ ಕುಟುಂಬ ಪರಾಜಿತಗೊಳಿಸಿದೆ. ವಿದೇಶಿ ವಿನಿಮಯ ಕೊರತೆಯಿಂದ ದೇಶ ಎದುರಿಸುತ್ತಿರುವ ಬಿಕ್ಕಟ್ಟನ್ನು ಸರಿಯಾಗಿ ನಿಭಾಯಿಸದ ಕಾರಣಕ್ಕೆ ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದ್ದು, ರಾಜಪಕ್ಸ ಕುಟುಂಬಕ್ಕೆ ಸಿಕ್ಕ ದೊಡ್ಡ ಜಯ ಎಂದೇ ಹೇಳಲಾಗುತ್ತಿದೆ.

ಉಪ ಸ್ಪೀಕರ್ ಸ್ಥಾನಕ್ಕ ಗುರುವಾರ ನಡೆದ ಚುನಾವಣೆಯಲ್ಲಿ ರಾಜಪಕ್ಸ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿದ ಪಕ್ಷೇತರ ಸಂಸದರಾದ ರಂಜಿತ್ ಸಿಯಾಂಬಲಪಿತಿಯಾ ಅವರು 148 ಮತಗಳನ್ನು ಪಡೆದಿದ್ದರೆ, ಅವರ ವಿರುದ್ಧ 65 ಮತಗಳು ಚಲಾವಣೆಯಾಗಿವೆ ಎಂದು ಸ್ಪೀಕರ್ ಮಹಿಂದಾ ಯಪಾ ಅಬೆಯವಾರ್ಡೆನೆ ಅವರು ಘೋಷಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.