ADVERTISEMENT

ರಾಜಪಕ್ಸೆ ಮತ್ತೆ ಅಧಿಕಾರಕ್ಕೆ?

ಪಿಟಿಐ
Published 6 ಆಗಸ್ಟ್ 2020, 22:27 IST
Last Updated 6 ಆಗಸ್ಟ್ 2020, 22:27 IST
ಮಹಿಂದ ರಾಜಪಕ್ಸೆ
ಮಹಿಂದ ರಾಜಪಕ್ಸೆ   

ಕೊಲಂಬೊ: ಶ್ರೀಲಂಕಾ ಪ್ರಧಾನಿ ಮಹಿಂದ ರಾಜಪಕ್ಸೆ ಅವರ ಪಕ್ಷ ಎಸ್‌ಎಲ್‌ಪಿಪಿ ಜಯಭೇರಿಯತ್ತ ಸಾಗಿದ್ದು, ಏಷ್ಯಾದಲ್ಲಿ ದೀರ್ಘಾವಧಿಗೆ ಆಡಳಿತ ನಡೆಸಿದ ಖ್ಯಾತಿ ಹೊಂದಿರುವ ರಾಜಪಕ್ಸೆ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವುದು ಖಚಿತವಾಗಿದೆ.

ದ್ವೀಪ ರಾಷ್ಟ್ರದಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಗುರುವಾರ ತಡರಾತ್ರಿಯೂ ಮುಂದುವರಿಯಿತು. ಶ್ರೀಲಂಕಾ ಸಂಸತ್‌ನ ಸದಸ್ಯರ ಸಂಖ್ಯೆ 225. ಪ್ರಕಟವಾದ ಫಲಿತಾಂಶಗಳ ಪೈಕಿ ರಾಜಪಕ್ಸೆಯವರ ಪಕ್ಷ ಭಾರಿ ಗೆಲುವಿನತ್ತ ಸಾಗಿದೆ.

ಅಧ್ಯಕ್ಷ ಗೋಟಬಯ ರಾಜಪಕ್ಸೆ ‘ಇದು ಆಡಳಿತಾರೂಢ ಪಕ್ಷಕ್ಕೆ ಲಭಿಸಿದ ಅದ್ಭುತ ಗೆಲುವು’ ಎಂದು ಟ್ವೀಟ್‌ ಮಾಡಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ರಾಜಪಕ್ಸೆ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಮಹಿಂದ ಅವರ ಪ್ರಬಲ ಪ್ರತಿಸ್ಪರ್ಧಿ ಎಂದೇ ಪರಿಗಣಿಸಲಾಗಿರುವ ಸಜಿತ್‌ ಪ್ರೇಮದಾಸ ಅವರ ಪಕ್ಷ ಯುನೈಟೆಡ್‌ ನ್ಯಾಷನಲ್‌ ಪಾರ್ಟಿ (ಯುಎನ್‌ಪಿ) ನಾಲ್ಕನೇ ಸ್ಥಾನ ಪಡೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.