ADVERTISEMENT

ಭಾರತದ 19 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 13:38 IST
Last Updated 8 ಫೆಬ್ರುವರಿ 2024, 13:38 IST
-
-   

ಕೊಲಂಬೊ: ‘ಶ್ರೀಲಂಕಾದ ಸಮುದ್ರ ಗಡಿ ಒಳಗೆ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ 19 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ’ ಎಂದು ಶ್ರೀಲಂಕಾ ನೌಕಾಪಡೆ ಗುರುವಾರ ತಿಳಿಸಿದೆ.

‘ಉತ್ತರ ಜಾಫ್ನಾ ಪ್ರಾಂತ್ಯದ ಡೆಲ್ಫ್ಟ್ ದ್ವೀಪದ ಬಳಿ ಬುಧವಾರ ಕಾರ್ಯಾಚರಣೆ ನಡೆಸಿದ ಶ್ರೀಲಂಕಾ ಕರಾವಳಿ ಗಸ್ತು ಪಡೆ ಮತ್ತು ನೌಕಾಪಡೆಯು, ಅಕ್ರಮವಾಗಿ  ಮೀನುಗಾರಿಕೆ ನಡೆಸುತ್ತಿದ್ದ 19 ಭಾರತೀಯ ಮೀನುಗಾರರು ಮತ್ತು 2 ಭಾರತೀಯ ಪ್ರಯಾಣಿಕರನ್ನು ಬಂಧಿಸಿದೆ’ ಎಂದು ಮಾಹಿತಿ ನೀಡಿದೆ.

‘ಬಂಧಿತ ಮೀನುಗಾರರು ಮತ್ತು ಪ್ರಯಾಣಿಕರನ್ನು ಕಂಕೆಸಂತುರೈ ಬಂದರಿಗೆ ಕರೆತಂದು, ಮೀನುಗಾರಿಕಾ ಇನ್ಸ್‌ಪೆಕ್ಟರ್‌ ಅವರಿಗೆ ಒಪ್ಪಿಸಲಾಗಿದೆ’ ಎಂದು ತಿಳಿಸಿದೆ. 

ADVERTISEMENT

‘ಈ ವರ್ಷ ಈವರೆಗೆ ನಮ್ಮ ನೌಕಾಪಡೆಯು ಭಾರತದ 88 ಮೀನುಗಾರರನ್ನು ಮತ್ತು 12 ಪ್ರಯಾಣಿಕರನ್ನು ಬಂಧಿಸಿದೆ’ ಎಂದು ನೌಕಾಪಡೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.