ADVERTISEMENT

ತೈಮೂರ್‌ ಜತೆ ಜಂಟಿ ಸಮರಾಭ್ಯಾಸ: ವರದಿ ಅಲ್ಲಗಳೆದ ಶ್ರೀಲಂಕಾ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 16:01 IST
Last Updated 14 ಆಗಸ್ಟ್ 2022, 16:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಲೊಂಬೊ(ಪಿಟಿಐ):ಕೊಲಂಬೊ ಬಂದರಿನಲ್ಲಿ ಲಂಗರು ಹಾಕಿಲಿರುವ ಪಾಕ್‌ ಯುದ್ಧನೌಕೆ ಪಿಎನ್‌ಎಸ್ ತೈಮೂರ್‌ ಜತೆ ಶ್ರೀಲಂಕಾ ನೌಕಾ ಪಡೆಯು ಜಂಟಿ ಸಮರಾಭ್ಯಾಸ ನಡೆಸುವ ಸಾಧ್ಯತೆ ಇದೆ ಎಂಬ ಮಾಧ್ಯಮಗಳ ವರದಿಗಳನ್ನು ಶ್ರೀಲಂಕಾ ಭಾನುವಾರ ತಳ್ಳಿಹಾಕಿದೆ.

ಆದರೆ, ಈ ನೌಕೆಯು ದೇಶವನ್ನು ತೊರೆಯುವಾಗ ಪಶ್ಚಿಮ ಸಮುದ್ರಗಳಲ್ಲಿ ಪೂರ್ವಯೋಜಿತವಲ್ಲದ ಕವಾಯತು ನಡೆಸಲಿದೆ ಎಂದು ಅದು ದೃಢಪಡಿಸಿದೆ.

‘ಪಾಕಿಸ್ತಾನ ನೌಕಾಪಡೆಯ ತೈಮೂರ್ ಸಮರನೌಕೆ ಶುಕ್ರವಾರ ಕೊಲೊಂಬೊ ಬಂದರಿಗೆ ಬಂದಿದೆ. ಇದೊಂದು ಔಪಚಾರಿಕವಾದ ಅಧಿಕೃತ ಭೇಟಿ.ದ್ವೀಪ ರಾಷ್ಟ್ರ ತೊರೆಯುವಾಗ ಕೊಲೊಂಬೊ ಸಮುದ್ರದಲ್ಲಿ ದೇಶದ ನೌಕಾಪಡೆಯ ಎಸ್‌ಎಲ್‌ಎನ್‌ಎಸ್‌ ಸಿಂದೂರಲಾ ನೌಕೆಯ ಜತೆಗೆಪೂರ್ವಯೋಜಿತವಲ್ಲದ ಕವಾಯತು ನಡೆಸಲಿದೆ’ ಎಂದು ಶ್ರೀಲಂಕಾ ನೌಕಾಪಡೆ ಭಾನುವಾರ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.