ADVERTISEMENT

ಕೆನ್ಯಾದ ಮಾಜಿ ಪ್ರಧಾನಿ ಒಡಿಂಗಾ ಅಂತಿಮ ದರ್ಶನ: ಕಾಲ್ತುಳಿತದಲ್ಲಿ 18 ಜನರಿಗೆ ಗಾಯ

ಏಜೆನ್ಸೀಸ್
Published 17 ಅಕ್ಟೋಬರ್ 2025, 16:12 IST
Last Updated 17 ಅಕ್ಟೋಬರ್ 2025, 16:12 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

ನೈರೋಬಿ: ಕೆನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಅವರ ಅಂತಿಮದರ್ಶನದ ವೇಳೆ ನೈರೋಬಿಯಲ್ಲಿ ನಡೆದ ಕಾಲ್ತುಳಿತದಲ್ಲಿ ಶುಕ್ರವಾರ 18 ಮಂದಿ ಗಾಯಗೊಂಡಿದ್ದಾರೆ. 

ಒಡಿಂಗಾ ಅವರ ಮೃತದೇಹವನ್ನು ಇಡಲಾಗಿದ್ದ ನೈರೋಬಿಯ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಸಾವಿರಾರು ಜನ ಸೇರಿದ್ದರು. 

ADVERTISEMENT

ಗುರುವಾರ ಬೇರೊಂದು ಕ್ರೀಡಾಂಗಣದಲ್ಲಿ ಒಡಿಂಗಾ ಅವರ ಮೃತದೇಹವನ್ನು ಇಡಲಾಗಿತ್ತು. ಅಲ್ಲಿ ಕಾಲ್ತುಳಿತ ಸಂಭವಿಸಿದ ಪರಿಣಾಮ ಮೂವರು ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.