
ಸುಲಭವಾಗಿ ಹೊತ್ತೊಯ್ಯಬಹುದಾದ ಸ್ಟಾರ್‌ಲಿಂಕ್ ಆ್ಯಂಟೆನಾ
ಚಿತ್ರ: ಸ್ಟಾರ್‌ಲಿಂಕ್ ವೆಬ್‌ಸೈಟ್
ದುಬೈ: ಉಪಗ್ರಹ ಇಂಟರ್ನೆಟ್ ಪೂರೈಕೆದಾರ ಸಂಸ್ಥೆ ಸ್ಟಾರ್‌ಲಿಂಕ್ ಈಗ ಇರಾನ್‌ನಲ್ಲಿ ಉಚಿತ ಸೇವೆಯನ್ನು ನೀಡುತ್ತಿದೆ ಎಂದು ಪ್ರತಿಭಟನಾಕಾರರು ಬುಧವಾರ ತಿಳಿಸಿದ್ದಾರೆ.
ಈ ಸೇವೆಯನ್ನು ಇರಾನ್‌ಗೆ ತಲುಪಿಸಲು ನೆರವಾದ ಲಾಸ್ ಏಂಜಲೀಸ್ ಮೂಲದ ಹೋರಾಟಗಾರ ಮೆಹದಿ ಯಾಹ್ಯಾನೆಜಾದ್, ಇಂಟರ್ನೆಟ್ ಉಚಿತ ಸೇವೆ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ. ಇತರ ಹೋರಾಟಗಾರರು ಸಹ ಸೇವೆ ಉಚಿತವಾಗಿದೆ ಎಂದು ಆನ್‌ಲೈನ್ ಸಂದೇಶಗಳಲ್ಲಿ ದೃಢಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.
‘ಸ್ಟಾರ್‌ಲಿಂಕ್ ಟರ್ಮಿನಲ್‌ಗಳಿಗೆ ಉಚಿತ ಚಂದಾದಾರಿಕೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ನಾವು ದೃಢಪಡಿಸಬಹುದು’ ಎಂದು ಯಾಹ್ಯಾನೆಜಾದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇರಾನ್‌ನಲ್ಲಿ ಹೊಸದಾಗಿ ಸಕ್ರಿಯಗೊಳಿಸಲಾದ ಸ್ಟಾರ್‌ಲಿಂಕ್ ಟರ್ಮಿನಲ್ ಬಳಸಿ ನಾವು ಅದನ್ನು ಪರೀಕ್ಷಿಸಿದ್ದೇವೆ ಎಂದೂ ಹೇಳಿದ್ದಾರೆ.
ಇರಾನ್ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ತೀವ್ರಗೊಂಡಾಗ ಇಂಟರ್ನೆಟ್ ಸ್ಥಗಿತಗೊಳಿಸಿ ಅವರ ವಿರುದ್ಧ ರಕ್ತಸಿಕ್ತ ದಮನವನ್ನು ಪ್ರಾರಂಭಿಸಿದಾಗ ಗುರುವಾರ ರಾತ್ರಿಯಿಂದ ಸ್ಟಾರ್‌ಲಿಂಕ್ ಸೇವೆ ಆರಂಭವಾಗಿದೆ. ಇರಾನಿಯನ್ನರು ಈಗ ಹೊರಗಿನ ಪ್ರಪಂಚದೊಂದಿಗೆ ಸಂವಹನ ನಡೆಸಲು ಸ್ಟಾರ್‌ಲಿಂಕ್ ಏಕೈಕ ಮಾರ್ಗವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.