ADVERTISEMENT

ಉತ್ತರ ಕೊರಿಯಾದಲ್ಲಿ ಇಲ್ಲ ಕೋವಿಡ್–19 ಸೋಂಕು!

ಏಜೆನ್ಸೀಸ್
Published 11 ಮೇ 2021, 10:19 IST
Last Updated 11 ಮೇ 2021, 10:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸೋಲ್: ದೇಶದಲ್ಲಿ ಏಪ್ರಿಲ್‌ ವೇಳೆಗೆ 25,986 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಒಂದೇ ಒಂದು ಸೋಂಕು ಪ್ರಕರಣ ಪತ್ತೆಯಾಗಿಲ್ಲ ಎಂದು ಉತ್ತರ ಕೊರಿಯಾವು ವಿಶ್ವ ಆರೋಗ್ಯ ಸಂಸ್ಥೆಗೆ (ಡಬ್ಲ್ಯುಎಚ್‌ಒ) ತಿಳಿಸಿದೆ.

ಏಪ್ರಿಲ್ 23–29ರ ಅವಧಿಯಲ್ಲಿ 751 ಮಂದಿಯನ್ನು ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 139 ಮಂದಿಯಲ್ಲಿ ಶೀತಜ್ವರ ಮಾದರಿಯ ಅನಾರೋಗ್ಯ ಅಥವಾ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ಡಬ್ಲ್ಯುಎಚ್‌ಒದ ಸಾಪ್ತಾಹಿಕ ಮೇಲ್ವಿಚಾರಣಾ ವರದಿಯಲ್ಲಿ ತಿಳಿಸಲಾಗಿದೆ.

ಆದರೆ, ಸಂಪೂರ್ಣ ಕೊರೊನಾಮುಕ್ತವಾಗಿರುವ ಬಗ್ಗೆ ಉತ್ತರ ಕೊರಿಯಾದ ಪ್ರತಿಪಾದನೆ ಬಗ್ಗೆ ತಜ್ಞರು ಸಂಶಯ ವ್ಯಕ್ತಪಡಿಸಿದ್ದಾರೆ.

ವೈರಸ್ ಸೋಂಕು ಹರಡದಂತೆ ಕೈಗೊಂಡಿರುವ ಕ್ರಮಗಳನ್ನು ಉತ್ತರ ಕೊರಿಯಾ ಸರ್ಕಾರವು ‘ರಾಷ್ಟ್ರೀಯ ಅಸ್ತಿತ್ವದ ವಿಷಯ’ ಎಂದು ಬಣ್ಣಿಸಿದೆ. ಸಾಂಕ್ರಾಮಿಕವನ್ನು ತಡೆಗಟ್ಟುವ ಸಲುವಾಗಿ ಉತ್ತರ ಕೊರಿಯಾವು ಪ್ರವಾಸಿಗರನ್ನು ನಿರ್ಬಂಧಿಸಿದ್ದಲ್ಲದೆ, ದೇಶದಲ್ಲಿರುವ ಇತರ ರಾಷ್ಟ್ರಗಳ ರಾಜತಾಂತ್ರಿಕರನ್ನೂ ಸ್ವದೇಶಗಳಿಗೆ ಕಳುಹಿಸಿತ್ತು. ಇಷ್ಟೇ ಅಲ್ಲದೆ, ಗಡಿಯಾಚೆಗಿನ ಸಂಚಾರ ಮತ್ತು ವ್ಯಾಪಾರವನ್ನು ತೀವ್ರವಾಗಿ ನಿರ್ಬಂಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.