ADVERTISEMENT

‘ಆಪ್ಗನ್ ವಿಷಯದಲ್ಲಿ ಹಸ್ತಕ್ಷೇಪ ನಿಲ್ಲಿಸಲಿ’

ತಾಲಿಬಾನ್ ಪರಮೋಚ್ಚ ನಾಯಕ ಹಿಬತುಲ್ಲಾ ಅಖುಂದ್‌ಝದಾ ಹೇಳಿಕೆ

ಏಜೆನ್ಸೀಸ್
Published 1 ಜುಲೈ 2022, 13:32 IST
Last Updated 1 ಜುಲೈ 2022, 13:32 IST
ಹಿಬತುಲ್ಲಾ ಅಖುಂದ್‌ಝದಾ
ಹಿಬತುಲ್ಲಾ ಅಖುಂದ್‌ಝದಾ   

ಕಾಬೂಲ್‌ (ಎಎಫ್‌ಪಿ): ಅಫ್ಗಾನಿಸ್ತಾನದಲ್ಲಿ ಹೇಗೆ ಆಡಳಿತ ನಡೆಸಬೇಕೆಂದು ಪಾಠ ಮಾಡುವುದನ್ನು ನಿಲ್ಲಿಸಿ, ಷರಿಯಾ ಕಾನೂನಿನ ಅನುಷ್ಠಾನದಿಂದ ಮಾತ್ರ ಇಸ್ಲಾಮಿಕ್‌ ರಾಜ್ಯಾಡಳಿತ ಯಶಸ್ವಿಯಾಗಲು ಸಾಧ್ಯ ಎಂದು ತಾಲಿಬಾನ್ ಪರಮೋಚ್ಚ ನಾಯಕ ಹಿಬತುಲ್ಲಾ ಅಖುಂದ್‌ಝದಾ ಹೇಳಿದ್ದಾರೆ.

ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಇಚ್ಛಿಸದ ಅಖುಂದ್‌ಝದಾ ಅವರು ಧಾರ್ಮಿಕ ನಾಯಕರ ಸಭೆಯನ್ನು ಉದ್ದೇಶಿಸಿ ಮಾಡಿದ ಭಾಷಣ ರೇಡಿಯೊದಲ್ಲಿ ಪ್ರಸಾರವಾಗಿದೆ. ಅದರಲ್ಲಿ, ‘ನಮ್ಮ ದೇಶದ ವಿಷಯದಲ್ಲಿ ಜಗತ್ತು ಏಕೆ ಹಸ್ತಕ್ಷೇಪ ಮಾಡುತ್ತಿದೆ’ ಎಂದು ಪ್ರಶ್ನಿಸಿದ್ದಾರೆ.

‘ವಿಶ್ವದ ಬೇರೆ ಬೇರೆ ರಾಷ್ಟ್ರಗಳು ನಮ್ಮನ್ನು ಹೀಗೆ ಏಕೆ ಮಾಡುತ್ತಿದ್ದೀರಿ, ಹಾಗೆ ಏಕೆ ಮಾಡುತ್ತಿದ್ದೀರಿ ಎಂದು ಕೇಳುತ್ತಿವೆ. ನಮ್ಮ ಕೆಲಸದಲ್ಲಿ ಅವರು ಏಕೆ ಹಸ್ತಕ್ಷೇಪ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.