ಬೀಜಿಂಗ್: ಮೂರು ತಿಂಗಳಅವಧಿಯ ಸುದೀರ್ಘ ಲಾಕ್‌ಡೌನ್ ಮುಗಿಸಿ ಚೀನಾದಲ್ಲಿ ಶಾಲೆಗಳನ್ನು ತೆರೆಯಲಾಗಿದೆ. ಈ ವೇಳೆ ಪರಸ್ಪರ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ವಿಶೇಷವಾಗಿ ವಿನ್ಯಾಸ ಮಾಡಲಾದ ‘ಒಂದು ಮೀಟರ್ ಟೋಪಿ’ಗಳನ್ನು ಧರಿಸಿ ಮಕ್ಕಳು ಶಾಲೆಗೆ ಬಂದಿದ್ದಾರೆ.
ಈ ಟೋಪಿಗಳನ್ನುಕಾರ್ಡ್‌ಬೋರ್ಡ್ ಶೀಟ್, ಕಡ್ಡಿಗಳನ್ನು ಬಳಸಿ ಮಾಡಲಾಗಿವೆ. ಟೋಪಿಯ ಎರಡೂ ತುದಿಯಲ್ಲಿ ಉದ್ದದ ಕಡ್ಡಿಗಳನ್ನು ಸಿಕ್ಕಿಸಲಾಗಿದ್ದು, ಇದು ಅಂತರ ಕಾಯ್ದುಕೊಳ್ಳಲು ನೆರವಾಗಲಿದೆ. ಇಂತಹವಿಚಿತ್ರ ವಿನ್ಯಾಸದ ಟೋಪಿಗಳನ್ನು ತೊಟ್ಟು ಮಕ್ಕಳು ಶಾಲೆಯಲ್ಲಿ ಕುಳಿತಿರುವ ವಿಡಿಯೊಗಳು ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಟೋಪಿಯ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಲವರುಹಂಚಿಕೊಂಡಿದ್ದಾರೆ. ಅದರಲ್ಲಿಎಲೀನ್ ಚೆಂಗ್ಯುನ್ ಚೌ ಎನ್ನುವವರು, ಚೀನಾದಲ್ಲಿ ಸಾಂಗ್ ರಾಜವಂಶಸ್ಥರು ಬಳಸುತ್ತಿದ್ದ ಟೋಪಿಗಳೊಂದಿಗೆ ಮಕ್ಕಳ ಟೋಪಿಗಳನ್ನು ಹೋಲಿಸಿದ್ದಾರೆ.
‘ಸಾಂಗ್ ರಾಜವಂಶದ ಆಳ್ವಿಕೆ ವೇಳೆ ಉನ್ನತ ಸ್ಥಾನಗಳಲ್ಲಿದ್ದ ಅಧಿಕಾರಿಗಳು ಪರಸ್ಪರ ಪಿತೂರಿ ಮಾಡುವುದನ್ನು ತಡೆಯಬೇಕಾಗಿತ್ತು. ಅವರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದುದ್ದರ ನೈಜ ಉದ್ದೇಶವದು’ ಎಂದು ಎಲೀನ್ ಟ್ವೀಟ್ ಮಾಡಿದ್ದಾರೆ.
ಈ ಚಿತ್ರಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಸೋಂಕು ಹರಡುವುದನ್ನು ತಡೆಯಲು ಈ ಟೋಪಿಗಳಿಂದ ಹೇಗೆ ಸಾಧ್ಯವೆಂದು ಕೆಲವು ಆಶ್ಚರ್ಯ ವ್ಯಕ್ತಪಡಿಸಿದ್ದರೆ, ಹಲವರು ಸೃಜನಶೀಲತೆಯನ್ನು ಮೆಚ್ಚಿಕೊಂಡಿದ್ದಾರೆ. ‘ಈ ಟೋಪಿಗಳು ನಿಮ್ಮನ್ನು ಸುರಕ್ಷಿತವಾಗಿಡಲಿವೆ ಮತ್ತು ನೀವು ಮತ್ತಷ್ಟು ಮುದ್ದಾಗಿ ಕಾಣುವಂತೆ ಮಾಡಿವೆ’ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.