ಜಲಾಂತರ್ಗಾಮಿ
ಬೆಂಗಳೂರು: ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದ ಜಲಾಂತರ್ಗಾಮಿ (ಸಬ್‌ಮರೈನ್) ಒಂದು ಕೆಂಪು ಸಮುದ್ರದಲ್ಲಿ ಅಪಘಾತಕ್ಕೀಡಾಗಿ 6 ಜನರು ಸ್ಥಳದಲ್ಲಿಯೇ ಮೃತಪಟ್ಟು 20 ಜನರು ಗಾಯಗೊಂಡಿರುವ ಘಟನೆ ಈಜಿಪ್ಟ್ ಬಳಿಯ ಹುರ್‌ಘಾಡಾ ಕರಾವಳಿಯಲ್ಲಿ ಶುಕ್ರವಾರ ಸಂಭವಿಸಿದೆ.
ಘಟನೆಯಲ್ಲಿ ಒಟ್ಟು 39 ಜನರನ್ನು ರಕ್ಷಿಸಲಾಗಿದೆ. ಯಾರೂ ಕಾಣೆಯಾಗಿಲ್ಲ. ಮೃತ ಆರು ಜನರೆಲ್ಲ ರಷ್ಯಾ ಮೂಲದವರು ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿರುವುದಾಗಿ ಬಿಬಿಸಿ ವಾಹಿನಿ ವರದಿ ಮಾಡಿದೆ.
ಪ್ರವಾಸಿಗರ ಸಬ್‌ಮರೈನ್‌ನಲ್ಲಿ ಒಟ್ಟು 45 ಜನ ವಿಹಾರ ನಡೆಸುತ್ತಿದ್ದರು. ಇದರಲ್ಲಿ ರಷ್ಯಾ, ನಾರ್ವೆ, ಸ್ವಿಡನ್ ಮತ್ತು ಭಾರತದ ಪ್ರವಾಸಿಗರು ಇದ್ದರು ಎಂದು ತಿಳಿಸಿದ್ದಾರೆ.
ಸಮುದ್ರದಾಳದಲ್ಲಿ ಬಂಡೆಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ಕಂಡುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಜಲಾಂತರ್ಗಾಮಿಯಲ್ಲಿ ಕೆಲವು ಭಾರತೀಯರೂ ಇದ್ದರು. ಅವರು ಸುರಕ್ಷಿತವಾಗಿದ್ದಾರೆ. ಬಹುತೇಕರು ರಷ್ಯಾದವರೇ ಪ್ರಯಾಣಿಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.