
ಕೈರೊ: ಕೇಂದ್ರ ಸುಡಾನ್‌ನಲ್ಲಿ ಯುದ್ಧ ಕಾರಣಕ್ಕೆ ದೇಶ ತೊರೆದು ಹೋಗುತ್ತಿದ್ದ ಕುಟುಂಬಗಳಿದ್ದ ವಾಹನದ ಮೇಲೆ ಅರೆ ಸೇನಾ ಪಡೆ ಗುಂಪು ಆರ್‌ಎಸ್‌ಎಫ್ ನಡೆಸಿದ ಡ್ರೋನ್ ದಾಳಿಯಲ್ಲಿ ಎಂಟು ಮಕ್ಕಳು ಸೇರಿದಂತೆ 24 ಮಂದಿ ಮೃತಪಟ್ಟಿದ್ದಾರೆ ಎಂದು ವೈದ್ಯರ ತಂಡ ಶನಿವಾರ ತಿಳಿಸಿದೆ.
‘ಉತ್ತರ ಕೊರ್ಡೊಫನ್ ಪ್ರಾಂತ್ಯದ ರಹಾದ್ ನಗರದ ಸಮೀಪ ಆರ್‌ಎಸ್‌ಎಫ್ ದಾಳಿ ನಡೆಸಿದೆ. ಅಂತರರಾಷ್ಟ್ರೀಯ ಸಮುದಾಯ ಮತ್ತು ಮಾನವ ಹಕ್ಕು ಸಂಘಟನೆಗಳು ನಾಗರಿಕರ ರಕ್ಷಣೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಯುದ್ಧದ ಮೇಲೆ ನಿಗಾ ಇಟ್ಟಿರುವ ಸುಡಾನ್ ವೈದ್ಯರ ತಂಡ ಮನವಿ ಮಾಡಿದೆ.
ಸುಡಾನ್ ಸಶಸ್ತ್ರ ಪಡೆಗಳು (ಎಸ್‌ಎಎಫ್) ಮತ್ತು ಆರ್‌ಎಸ್‌ಎಫ್(ರ‍್ಯಾಪಿಡ್ ಸಪೊರ್ಟ್ ಫೋರ್ಸಸ್) ನಡುವೆ ಆಂತರಿಕ ಯುದ್ಧ ನಡೆಯುತ್ತಿದೆ. ವಿಶ್ವಸಂಸ್ಥೆಯ ಪ್ರಕಾರ ಈವರೆಗೆ 40,000ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಆದರೆ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಿದೆ ಎಂದು ನೆರವು ಸಂಸ್ಥೆಗಳು ಹೇಳುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.