ADVERTISEMENT

ಸುಡಾನ್: ಉಚ್ಚಾಟಿತ ಪ್ರಧಾನಿ ಮರುನೇಮಕಕ್ಕೆ ಸೇನೆ ಒಪ್ಪಿಗೆ

ಏಜೆನ್ಸೀಸ್
Published 21 ನವೆಂಬರ್ 2021, 14:32 IST
Last Updated 21 ನವೆಂಬರ್ 2021, 14:32 IST
ಅಬ್ದಲ್ಲಾ ಹಮ್‌ಡೋಕ್
ಅಬ್ದಲ್ಲಾ ಹಮ್‌ಡೋಕ್   

‌ಕೈರೊ: ‘ಅಕ್ಟೋಬರ್‌ನಲ್ಲಿ ನಡೆದ ದಂಗೆಯಲ್ಲಿ ಪದಚ್ಯುತಗೊಂಡಿದ್ದ ಸುಡಾನ್ ಪ್ರಧಾನಿ ಅಬ್ದಲ್ಲಾ ಹಮ್‌ಡೋಕ್ ಅವರನ್ನು ಮರುನೇಮಕ ಮಾಡಲು ಅಲ್ಲಿನ ರಾಜಕೀಯ ನಾಯಕರು ಮತ್ತು ಮಿಲಿಟರಿ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಸೇನೆ ಮತ್ತು ಸರ್ಕಾರಿ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

‘ಅ. 25ರಂದು ನಡೆದ ದಂಗೆಯಲ್ಲಿ ಬಂಧಿತರಾಗಿದ್ದ ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರನ್ನು ಸುಡಾನ್‌ನ ಅತಿದೊಡ್ಡ ರಾಜಕೀಯ ಪಕ್ಷವಾಗಿರುವ ಉಮ್ಮಾ ಪಕ್ಷ, ಮಿಲಿಟರಿ ಮತ್ತು ರಾಜಕೀಯ ಪಕ್ಷಗಳ ನಡುವಿನ ಒಪ್ಪಂದದ ಭಾಗವಾಗಿ ಬಿಡುಗಡೆ ಮಾಡಲಾಗುವುದು’ ಎಂದೂ ಅಧಿಕಾರಿಗಳು ಹೇಳಿದ್ದಾರೆ.

ಆದರೆ, ‘ಎಲ್ಲ ಕ್ರಾಂತಿಕಾರಿಗಳು ಮತ್ತು ಸುಡಾನ್ ಜನರ ಆಕಾಂಕ್ಷೆಗಳನ್ನು ಪೂರೈಸಲು ವಿಫಲವಾದ ಈ ಒಪ್ಪಂದಕ್ಕೆ ಸಹಿ ಹಾಕಿಲ್ಲ’ ಎಂದು ಉಮ್ಮಾ ಪಕ್ಷವು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ.

ADVERTISEMENT

‘ಈ ಒಪ್ಪಂದದ ಹಿಂದೆ ವಿಶ್ವಸಂಸ್ಥೆ, ಅಮೆರಿಕ ಮತ್ತು ಇತರರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಅಬ್ದಲ್ಲಾ ಹಮ್‌ಡೋಕ್ ಅವರು ಸಚಿವ ಸಂಪುಟದ ನಾಯಕತ್ವ ವಹಿಸಲಿದ್ದಾರೆ’ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.