ADVERTISEMENT

ಅಫ್ಗಾನಿಸ್ತಾನದಲ್ಲಿ ಆತ್ಮಾಹುತಿ ಬಾಂಬ್‌ದಾಳಿ: 14 ಸಾವು, ದೇಶದ ಉಪಾಧ್ಯಕ್ಷ ಪಾರು

ಏಜೆನ್ಸೀಸ್
Published 23 ಜುಲೈ 2018, 5:40 IST
Last Updated 23 ಜುಲೈ 2018, 5:40 IST
ದಾಳಿಯಲ್ಲಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸಾಗಿಸಲಾಯಿತು – ಎಎಫ್‌ಪಿ ಚಿತ್ರ
ದಾಳಿಯಲ್ಲಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸಾಗಿಸಲಾಯಿತು – ಎಎಫ್‌ಪಿ ಚಿತ್ರ   

ಕಾಬೂಲ್:ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಆತ್ಮಾಹುತಿ ಬಾಂಬ್‌ ದಾಳಿ ನಡೆದಿದೆ. ಸ್ಪೋಟದಲ್ಲಿ 14 ಜನ ಮೃತಪಟ್ಟಿದ್ದು, ದೇಶದ ಉಪಾಧ್ಯಕ್ಷ ಅಬ್ದುಲ್‌ ರಸೀದ್‌ ದೊಸ್ತಂ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ಮೃತರಲ್ಲಿ ಸೇನಾ ಸಿಬ್ಬಂದಿಯೂ ಸೇರಿದ್ದಾರೆ. ಈ ಕೃತ್ಯದಿಂದಾಗಿ 50ಕ್ಕೂ ಹೆಚ್ಚು ಜನರು ಗೊಂಡಿದ್ದಾರೆ. ದಾಳಿಯಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆಯ ಕೈವಾಡ ಇರಬಹುದೆಂದು ಶಂಕಿಸಲಾಗಿದೆ.

ದೊಸ್ತಂಒಂದು ವರ್ಷದ ಬಳಿಕ ದೇಶಕ್ಕೆ ಮರಳಿದ್ದಾರೆ. ಅವರು ವಿಮಾನ ನಿಲ್ದಾಣದಿಂದ ಹೊರಟ ಸ್ವಲ್ಪ ಹೊತ್ತಿನಲ್ಲಿಯೇ ಮಾನವ ಬಾಂಬ್‌ ಸಿಡಿದಿದೆ.

ADVERTISEMENT

ಲೈಂಗಿಕ ದೌರ್ಜನ್ಯದ ಪ್ರಕರಣಗಳುದೊಸ್ತಂರ ಹಿಂಬಾಲಕರ ಮೇಲೆ ಕಳೆದ ವರ್ಷ ದಾಖಲಾಗಿದ್ದವು. ಅವುಗಳ ತನಿಖೆ ಆರಂಭಗೊಂಡ ಬಳಿಕ ದೊಸ್ತಂ ದೇಶ ತೊರೆದು ಟರ್ಕಿಯಲ್ಲಿ ನೆಲೆಸಿದ್ದರು.

2001ರಲ್ಲಿ ತಾಲೀಬಾನ್‌ ಆಡಳಿತ ಕೊನೆಗೊಂಡ ಬಳಿಕದ ವಿದ್ಯಾಮಾನಗಳಲ್ಲಿ ದೊಸ್ತಂ ಮಾನವ ಹಕ್ಕುಗಳ ಉಲ್ಲಂಘನೆಯ ಕೃತ್ಯಗಳನ್ನು ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅವರ ಮೇಲೆ ಅಮೆರಿಕಾ ಸರ್ಕಾರ ಸಹ ಟೀಕಾ ಪ್ರಹಾರ ಮಾಡಿತ್ತು.

ಬಾಂಬ್‌ ದಾಳಿಯನ್ನು ಅಫ್ಗಾನಿಸ್ತಾನದ ಅಧ್ಯಕ್ಷ ಅಶ್ರಫ್‌ ಘನಿ ಬಲವಾಗಿ ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.