ADVERTISEMENT

ಜನ್ಮದತ್ತ ಪೌರತ್ವ: ಟ್ರಂಪ್‌ ಆದೇಶ ತಡೆಗೆ ‘ಸುಪ್ರೀಂ’ ಒಲವು

ಏಜೆನ್ಸೀಸ್
Published 16 ಮೇ 2025, 13:46 IST
Last Updated 16 ಮೇ 2025, 13:46 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

ವಾಷಿಂಗ್ಟನ್: ಅಮೆರಿಕದಲ್ಲಿ ನೆಲಸಿರುವ ವಲಸಿಗರ ಮಕ್ಕಳಿಗೆ ಜನ್ಮದತ್ತವಾಗಿ ಸಿಗುವ ಪೌರತ್ವ ಹಕ್ಕು ರದ್ದುಗೊಳಿಸಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್‌ ಇಚ್ಛೆ ವ್ಯಕ್ತಪಡಿಸಿದೆ.

ಇನ್ನೊಂದೆಡೆ, ಟ್ರಂಪ್‌ ಆಡಳಿತದ ಈ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿ ದೇಶದಾದ್ಯಂತ ಕೋರ್ಟ್‌ಗಳು ಆದೇಶಗಳನ್ನು ಹೊರಡಿಸುತ್ತಿರುವುದನ್ನು ತಡೆಯುವ ಕುರಿತ ಮಾರ್ಗಗಳನ್ನು ಕೂಡ ಸುಪ್ರೀಂ ಕೋರ್ಟ್‌ ಹುಡುಕುತ್ತಿದೆ.

ADVERTISEMENT

ಅಕ್ರಮವಾಗಿ ನೆಲಸಿರುವ ವಲಸಿಗರಿಗೆ ಜನಿಸುವ ಮಕ್ಕಳಿಗೆ ಪೌರತ್ವ ನೀಡಿಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಅನುಮತಿ ನೀಡುವುದರಿಂದ ಆಗುವ ಪರಿಣಾಮಗಳ ಬಗ್ಗೆ ಅಮೆರಿಕದ ಬಹುತೇಕ ನ್ಯಾಯಾಲಯಗಳು ಕಳವಳ ವ್ಯಕ್ತಪಡಿಸಿವೆ.  

ದೇಶದ ವಿವಿಧ ನ್ಯಾಯಾಲಯಗಳು ನೀಡಿದ್ದ ಆದೇಶಗಳನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿತು.

ಸುಪ್ರೀಂ ಕೋರ್ಟ್‌ನಲ್ಲಿನ ಕೆಲ ಉದಾರವಾದಿ ನ್ಯಾಯಮೂರ್ತಿಗಳು, ಟ್ರಂಪ್‌ ಆದೇಶಕ್ಕೆ ತಡೆ ನೀಡಿರುವ ಕೆಳ ನ್ಯಾಯಾಲಯಗಳ ನಿರ್ಧಾರವನ್ನು ಬೆಂಬಲಿಸುತ್ತಿದ್ದಾರೆ. ಪೌರತ್ವ ಕುರಿತ ಟ್ರಂಪ್‌ ಆದೇಶವು 125 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಜಾರಿಯಲ್ಲಿರುವ ನಿಲುವಿಗೆ ವಿರುದ್ಧವಾಗಲಿದೆ ಎಂದಿದ್ದಾರೆ.

ಆದರೆ, ಕೆಲ ಸಂಪ್ರದಾಯವಾದಿ ನ್ಯಾಯಮೂರ್ತಿಗಳು, ಟ್ರಂಪ್‌ ಆಡಳಿತದ ಆದೇಶದಿಂದ ಎಂತಹ ಪರಿಣಾಮ ಉಂಟಾಗಬಹುದು ಎಂಬ ಜಿಜ್ಞಾಸೆಯಲ್ಲಿದ್ದಾರೆ.  

ಈ ವಿಚಾರ ಕುರಿತ ಅಂತಿಮ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ಜೂನ್‌ ಅಂತ್ಯಕ್ಕೆ ಪ್ರಕಟಿಸುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.