ADVERTISEMENT

ದಾಖಲೆ ವೇಗದಲ್ಲಿ ಚಲಿಸಿದ ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 26 ಮೇ 2019, 12:02 IST
Last Updated 26 ಮೇ 2019, 12:02 IST
ಬುಲೆಟ್‌ ರೈಲು
ಬುಲೆಟ್‌ ರೈಲು   

ಟೊಕಿಯೊ: ಮುಂಬರುವ ಟೊಕಿಯೊ ಒಲಿಂಪಿಕ್ಸ್‌ಗಾಗಿ ಜಪಾನ್‌ ‘ಸುಪ್ರೀಂ’ ಬುಲೆಟ್‌ ರೈಲು ನಿರ್ಮಿಸಿದ್ದು, ಮಯ್‌ಬರಾ–ಕ್ಯೂಟೊ ನಗರಗಳ ನಡುವೆ ಗಂಟೆಗೆ 360 ಕಿ.ಮೀ ವೇಗದಲ್ಲಿ ಚಲಿಸಿ ಇದು ದಾಖಲೆ ಬರೆದಿದೆ.

‘ಸುಪ್ರೀಂ’ ಸುಧಾರಿತ ಬುಲೆಟ್‌ ರೈಲು ಆಗಿದ್ದು, ಕಡಿಮೆ ವಿದ್ಯುತ್ ಬಳಸುವುದಲ್ಲದೆ, ಎಂಜಿನ್ ಮತ್ತು ಹೊರ ವಿನ್ಯಾಸದಲ್ಲಿ ಹಲವು ಬದಲಾವಣೆ ಮಾಡಲಾಗಿದೆ ಎಂದು ಜಪಾನ್‌ ಕೇಂದ್ರ ರೈಲ್ವೆ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.

₹ 1,526 ಕೋಟಿ (2.2 ಶತಕೋಟಿ ಡಾಲರ್‌) ವೆಚ್ಚದಲ್ಲಿ ಹೊಸ ಬುಲೆಟ್‌ ರೈಲುಗಳನ್ನು ಜಪಾನ್‌ ತಯಾರಿಸುತ್ತಿದ್ದು,2030ರ ವೇಳೆಗೆ ‘ಸುಪ್ರೀಂ’ ಹಾಗೂ ‘ಆಲ್ಫಾ–ಎಕ್ಸ್’ ಮಾದರಿಯ ಬುಲೆಟ್‌ ರೈಲುಗಳು ಕಾರ್ಯಾಚರಿಸಲಿವೆ ಎಂದು ಜಪಾನ್ ರೈಲ್ವೆ ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.