ADVERTISEMENT

ವಾರಾಣಸಿ ಜೊತೆ ನೇಪಾಳ ಪ್ರಧಾನಿ ಸುಶೀಲಾ ಕಾರ್ಕಿ ಅವಿನಾಭಾವ ನಂಟು

ಪಿಟಿಐ
Published 13 ಸೆಪ್ಟೆಂಬರ್ 2025, 15:22 IST
Last Updated 13 ಸೆಪ್ಟೆಂಬರ್ 2025, 15:22 IST
<div class="paragraphs"><p>ಸುಶೀಲಾ ಕಾರ್ಕಿ</p></div>

ಸುಶೀಲಾ ಕಾರ್ಕಿ

   

ರಾಯಿಟರ್ಸ್‌

ವಾರಾಣಸಿ: ನೇಪಾಳದ ಮೊದಲ ಮಹಿಳಾ ಪ್ರಧಾನಿಯಾಗಿರುವ ಸುಶೀಲಾ ಕಾರ್ಕಿ (73) ಅವರು ವಾರಾಣಸಿಯೊಂದಿಗೆ ಅವಿನಾಭಾವ ನಂಟನ್ನು ಹೊಂದಿದ್ದಾರೆ.

ADVERTISEMENT

ಮಾಧ್ಯಮವೊಂದಕ್ಕೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ  ಅವರು ‘ಭಾರತದ ಸ್ನೇಹಿತೆ’ ಎಂದು ತಮ್ಮನ್ನು ಕರೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಉತ್ತರಪ್ರದೇಶದ ವಾರಾಣಸಿಯಲ್ಲಿರುವ ಪ್ರತಿಷ್ಠಿತ ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಲ್ಲಿ (ಬಿಎಚ್‌ಯು) ಸ್ನಾತಕೋತ್ತರ ಪದವಿ ಪಡೆದಿರುವುದಾಗಿ ಮತ್ತು ಇದೇ ವೇಳೆ ತಮ್ಮ ಜೀವನ ಸಂಗಾತಿಯನ್ನು ಭೇಟಿ ಮಾಡಿದ್ದಾಗಿ ತಿಳಿಸಿದ್ದಾರೆ.

‘ಕಾರ್ಕಿ ಅವರು 1975ರಲ್ಲಿ ಬಿಎಚ್‌ಯುನಲ್ಲಿ ರಾಜಕೀಯಶಾಸ್ತ್ರ  ಎಂ.ಎ ವ್ಯಾಸಂಗ ಮಾಡುತ್ತಿದ್ದರು. ಅದೇ ಸಂದರ್ಭದಲ್ಲಿ ನೇಪಾಳದ ರಾಜಪ್ರಭುತ್ವ ವಿರೋಧಿ ಪ್ರತಿಭಟನೆಗೆ ವಾರಾಣಸಿ ಕೇಂದ್ರವಾಗಿತ್ತು. ಕಾರ್ಕಿ ಅವರು  ಈ ಚಳವಳಿಯಲ್ಲಿ ಭಾಗಿಯಾಗಿದ್ದರು’ ಎಂದು ಬಿಎಚ್‌ಯುನ ನಿವೃತ್ತ ಪ್ರಾಧ್ಯಾಪಕ ದೀಪಕ್‌ ಮಲ್ಲಿಕ್‌ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.