ADVERTISEMENT

ಕಜಕಿಸ್ತಾನ: ಭಾರತೀಯ ಸಮುದಾಯದವರೊಂದಿಗೆ ಸುಷ್ಮಾ ಸಂವಾದ

ಪಿಟಿಐ
Published 3 ಆಗಸ್ಟ್ 2018, 11:28 IST
Last Updated 3 ಆಗಸ್ಟ್ 2018, 11:28 IST
ಸುಷ್ಮಾ ಸ್ವರಾಜ್‌
ಸುಷ್ಮಾ ಸ್ವರಾಜ್‌   

ಅಸ್ತಾನ: ಕಜಕಿಸ್ತಾನಕ್ಕೆ ಭೇಟಿ ನೀಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅಲ್ಲಿನ ಭಾರತೀಯ ಸಮುದಾಯದವರ ಜೊತೆ ಸಂವಾದ ನಡೆಸಿದ್ದಾರೆ.

‘ಕಜಕಿಸ್ತಾನದ ರಾಜಧಾನಿ ಅಸ್ತಾನವು ವಿಶ್ವದ ಎರಡನೇ ಅತಿ ಶೀತ ರಾಜಧಾನಿ. ಆದರೆ ಇಲ್ಲಿನ ಜನರ ಆತ್ಮೀಯತೆ ಕಂಡಾಗ ಶೀತದ ಅನುಭವವಾಗುವುದಿಲ್ಲ’ ಎಂದು ಈ ವೇಳೆ ಸುಷ್ಮಾ ಹೇಳಿದ್ದಾರೆ.

ಕಜಕಿಸ್ತಾನದ ವಿದೇಶಾಂಗ ಸಚಿವ ಕೈರಾತ್ ಅಬ್ದುರಖ್ಮನೊವ್ ಅವರನ್ನು ಭೇಟಿಯಾಗಿರುವ ಸುಷ್ಮಾ ಅವರು ವ್ಯಾಪಾರ, ಹೂಡಿಕೆ, ಇಂಧನ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ನೀಡುವ ಕುರಿತು ಚರ್ಚೆ ನಡೆಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ADVERTISEMENT

ಮೂರು ದೇಶಗಳ ಪ್ರವಾಸದಲ್ಲಿರುವ ಸಚಿವೆ ಕಿರ್ಗಿಸ್ತಾನ ಹಾಗೂ ಉಜ್ಬೇಕಿಸ್ತಾನಕ್ಕೂ ಭೇಟಿ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.