ಡಮಾಸ್ಕಸ್: ಸಿರಿಯಾದ ಸರ್ಕಾರಿ ಅಧಿಕಾರಿಗಳು ಮತ್ತು ದುರೂಸ್ ಧಾರ್ಮಿಕ ಅಲ್ಪಸಂಖ್ಯಾತರ ನಾಯಕರು ಬುಧವಾರ ಹೊಸದಾಗಿ ಕದನ ವಿರಾಮ ಘೋಷಿಸಿದ್ದಾರೆ.
ದುರೂಸ್ ಬಂಡುಕೋರರ ರಕ್ಷಣೆಗಾಗಿ ಇಸ್ರೇಲ್ ಡಮಾಸ್ಕಸ್ ಮೇಲೆ ಸರಣಿ ದಾಳಿ ನಡೆಸಿದ ಬೆನ್ನಲ್ಲೇ ಈ ಕದನ ವಿರಾಮದ ಘೋಷಣೆ ಆಗಿದೆ.
ಸರ್ಕಾರಿ ಸ್ವಾಮ್ಯದ ‘ಸನಾ’ ಸುದ್ದಿ ಸಂಸ್ಥೆ ಮತ್ತು ದುರೂಸ್ ಮುಖಂಡರು ವಿಡಿಯೊ ಸಂದೇಶದಲ್ಲಿ ಈ ಒಪ್ಪಂದದ ಕುರಿತು ಪ್ರಕಟಿಸಿದ್ದಾರೆ. ಆದರೆ ಈ ಒಪ್ಪಂದವು ಎಷ್ಟರ ಮಟ್ಟಿಗೆ ಜಾರಿಯಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಏಕೆಂದರೆ ಹಿಂದಿನ ದಿನವಷ್ಟೇ ಘೋಷಿಸಲಾಗಿದ್ದ ಕದನ ವಿರಾಮ ಅಷ್ಟೇ ಬೇಗನೆ ಮುರಿದು ಬಿದ್ದಿತ್ತು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.