ADVERTISEMENT

ಅಫ್ಗಾನಿಸ್ತಾನಕ್ಕೆ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಪುನರಾರಂಭವಾಗಬೇಕು: ತಾಲಿಬಾನ್

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 17:24 IST
Last Updated 26 ಸೆಪ್ಟೆಂಬರ್ 2021, 17:24 IST
   

ಕಾಬೂಲ್‌: ಅಫ್ಗಾನಿಸ್ತಾನಕ್ಕೆ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಪುನರಾರಂಭ ಮಾಡಬೇಕು ಎಂದು ಅಫ್ಗಾನಿಸ್ತಾನದ ತಾಲಿಬಾನ್‌ ಸರ್ಕಾರ ಭಾನುವಾರ ಮನವಿ ಮಾಡಿದೆ. ಕಾಬೂಲ್‌ ವಿಮಾನ ನಿಲ್ದಾಣವನ್ನು ದುರಸ್ತಿ ಮಾಡಲಾಗಿದೆ. ವಿಮಾನಯಾನಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದಿದೆ.

ಅಫ್ಗಾನಿಸ್ತಾವನ್ನು ತಾಲಿಬಾನ್‌ ವಶಕ್ಕೆ ತೆಗೆದುಕೊಂಡ ಬಳಿಕ ವಾಣಿಜ್ಯ ಉದ್ದೇಶದ ವಿಮಾನಯಾನವನ್ನು ಹಲವು ದೇಶಗಳು ಸ್ಥಗಿತಗೊಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT