ADVERTISEMENT

ಅಫ್ಗಾನಿಸ್ತಾನದಲ್ಲಿ ನಾಲ್ವರು ಮಹಿಳೆಯರ ಹತ್ಯೆ

ಏಜೆನ್ಸೀಸ್
Published 6 ನವೆಂಬರ್ 2021, 11:13 IST
Last Updated 6 ನವೆಂಬರ್ 2021, 11:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಾಬೂಲ್:ಅಫ್ಗಾನಿಸ್ತಾನದ ಮಜಾರ್-ಇ-ಷರೀಫ್‌ನ ಉತ್ತರ ಭಾಗದ ನಗರದಲ್ಲಿ ನಾಲ್ವರು ಮಹಿಳೆಯರ ಹತ್ಯೆ ನಡೆದಿರುವುದನ್ನು ತಾಲಿಬಾನ್ ಸರ್ಕಾರದ ವಕ್ತಾರರು ಶನಿವಾರ ದೃಢಪಡಿಸಿದ್ದಾರೆ.

ನಗರದ ಐದನೇ ಪೊಲೀಸ್ ಜಿಲ್ಲೆಯ ಮನೆಯೊಂದರಲ್ಲಿ ನಾಲ್ಕು ಶವಗಳು ಪತ್ತೆಯಾದ ನಂತರ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ ಎಂದು ಆಂತರಿಕ ಸಚಿವಾಲಯದ ವಕ್ತಾರ ಖಾರಿ ಸೈಯದ್ ಖೋಸ್ತಿ ವಿಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಬಂಧಿತರು ಪ್ರಾಥಮಿಕ ವಿಚಾರಣೆಯಲ್ಲಿ ಮಹಿಳೆಯರನ್ನು ಮನೆಗೆ ಆಹ್ವಾನಿಸಿದ್ದನ್ನು ಒಪ್ಪಿಕೊಂಡಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಪ್ರಕರಣವನ್ನು ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಮೃತರಲ್ಲಿ ಒಬ್ಬರು ಮಹಿಳಾ ಹಕ್ಕುಗಳ ಕಾರ್ಯಕರ್ತೆಯಾಗಿದ್ದು, ಅವರ ಕುಟುಂಬವು ಮಾಧ್ಯಮಗಳೊಂದಿಗೆ ಮಾತನಾಡಲು ಬಯಸುತ್ತಿಲ್ಲ’ ಎಂದು ಮೂಲವೊಂದು ಸುದ್ದಿಸಂಸ್ಥೆಗೆ ತಿಳಿಸಿದೆ.

‘ನಾಲ್ವರು ಮಹಿಳೆಯರು ಸ್ನೇಹಿತೆಯರು ಮತ್ತು ಸಹೋದ್ಯೋಗಿಗಳಾಗಿದ್ದು, ಅವರು ದೇಶದಿಂದ ಹೊರಹೋಗಲು ಮಜಾರ್-ಇ-ಶರೀಫ್ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ತಯಾರಿಯಲ್ಲಿದ್ದರು’ ಎಂದು ಬಿಬಿಸಿ ವರದಿ ಮಾಡಿದೆ.

‘ನಾಲ್ವರು ಮಹಿಳೆಯರು ಅಫ್ಗಾನಿಸ್ಥಾನದಿಂದ ನಾಗರಿಕರನ್ನು ಸ್ಥಳಾಂತರಿಸುವ ವಿಮಾನವನ್ನು ಹತ್ತಿಸಲು ಆಹ್ವಾನ ನೀಡಲಾಗಿದೆ ಎಂದು ಆ ಮಹಿಳೆಯರು ಭಾವಿಸಿದ್ದರು. ಅವರನ್ನು ಕಾರಿನಲ್ಲಿ ಕರೆದೊಯ್ಯಲಾಗಿತ್ತು. ನಂತರ ಅವರು ಶವವಾದರು’ ಎಂದು ಅನಾಮಧೇಯ ವ್ಯಕ್ತಿಯೊಬ್ಬರು ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.