ADVERTISEMENT

ಈದ್‌ ಉಲ್‌ ಫಿತ್ರ್‌: ತಾಲಿಬಾನ್‌ನಿಂದ ಮೂರು ದಿನಗಳ ಕದನ ವಿರಾಮ

ಏಜೆನ್ಸೀಸ್
Published 10 ಮೇ 2021, 6:48 IST
Last Updated 10 ಮೇ 2021, 6:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾಬೂಲ್‌: ತಾಲಿಬಾನ್‌ ಉಗ್ರ ಸಂಘಟನೆಯುಈದ್‌ ಉಲ್‌ ಫಿತ್ರ್‌ ಹಬ್ಬದ ಹಿನ್ನೆಲೆಯಲ್ಲಿಅಫ್ಗಾನಿಸ್ತಾನದಲ್ಲಿ ಸೋಮವಾರ ಮೂರು ದಿನಗಳ ಕದನ ವಿರಾಮ ಘೋಷಿಸಿದೆ.

‘ಈ ಕದನ ವಿರಾಮ ಘೋಷಣೆಯ ಕೆಲವು ಗಂಟೆಗಳು ಮುಂಚಿತವಾಗಿ ಜಾಬೂಲ್‌ ಪ್ರಾಂತ್ಯದಲ್ಲಿ ಬಸ್ಸೊಂದರಲ್ಲಿ ಬಾಂಬ್‌ ಸ್ಪೋಟಗೊಂಡಿದ್ದು, ಇದರಲ್ಲಿ 11 ಮಂದಿ ಮೃತಪಟ್ಟಿದ್ದಾರೆ. 28 ಮಂದಿಗೆ ಗಾಯಗಳಾಗಿವೆ’ ಎಂದು ಆತಂರಿಕ ಸಚಿವಾಲಯವು ತಿಳಿಸಿದೆ.

ಅಮೆರಿಕವು ತನ್ನ ಕೊನೆಯ 2,500 ಸೈನಿಕರನ್ನು ವಾ‍ಪಸ್‌ ಕರೆಸಿಕೊಳ್ಳುವ ‍ಪ್ರಕ್ರಿಯೆಯನ್ನು ಆರಂಭಿಸಿದೆ. ಇದರ ಬೆನ್ನಲ್ಲೇ ತಾಲಿಬಾನ್‌ನಿಂದ ಕದನ ವಿರಾಮವನ್ನು ಘೋಷಣೆಯಾಗಿದೆ.

ADVERTISEMENT

‘ಈ ಮೂರು ದಿನಗಳವರೆಗೆ ಶತ್ರುರಾಷ್ಟ್ರದ ಮೇಲೆ ಯಾವುದೇ ದಾಳಿ ನಡೆಸದಂತೆ ಸೂಚಿಸಲಾಗಿದೆ. ಒಂದು ವೇಳೆ ಈ ಸಮಯದಲ್ಲಿ ವಿರೋಧಿ ಮೊದಲ ದಾಳಿ ನಡೆಸಿದರೆ, ಇದಕ್ಕೆ ಪ್ರತ್ಯುತ್ತರ ನೀಡಲು ಸಿದ್ಧವಿರಿ’ ಎಂದು ತಾಲಿಬಾನ್‌ ಹೇಳಿದೆ.

ಎರಡು ದಿನಗಳ ಹಿಂದೆ ಕಾಬೂಲ್‌ನ ಶಾಲೆಯೊಂದರ ಬಳಿ ಸಂಭವಿಸಿದ ಸರಣಿ ಬಾಂಬ್‌ ಸ್ಫೋಟದಲ್ಲಿ 50 ಮಂದಿ ಮೃತಪಟ್ಟಿದ್ದು, 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ದಾಳಿಗೆ ತಾಲಿಬಾನ್‌ ಹೊಣೆ ಎಂದು ಆಫ್ಗನ್‌ ಸರ್ಕಾರ ದೂರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.