ADVERTISEMENT

ವೈಮಾನಿಕ ದಾಳಿಗೆ ಪ್ರತೀಕಾರ: ಪಾಕ್‌ನ ಹಲವು ಸ್ಥಳಗಳನ್ನು ಗುರಿಯಾಗಿಸಲಾಗಿದೆ;ಅಫ್ಗನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಡಿಸೆಂಬರ್ 2024, 9:55 IST
Last Updated 28 ಡಿಸೆಂಬರ್ 2024, 9:55 IST
<div class="paragraphs"><p>ತಾಲಿಬಾನ್ ಪಡೆಗಳು</p></div>

ತಾಲಿಬಾನ್ ಪಡೆಗಳು

   

–ರಾಯಿಟರ್ಸ್‌ ಚಿತ್ರ

ಕಾಬೂಲ್: ಪಾಕಿಸ್ತಾನದ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಅಫ್ಗಾನಿಸ್ತಾನದ ತಾಲಿಬಾನ್ ಪಡೆಗಳು ನೆರೆಯ ಪಾಕ್‌ನ ಹಲವು ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ ಎಂದು ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ಇಂದು (ಶನಿವಾರ) ತಿಳಿಸಿದೆ.

ADVERTISEMENT

ನಿರ್ಧಿಷ್ಟವಾಗಿ ಯಾವ ಯಾವ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂಬುದನ್ನು ಅಫ್ಗನ್‌ ಸರ್ಕಾರ ಖಚಿತಪಡಿಸಿಲ್ಲ. ಆದರೆ, ಪಾಕ್‌ ಗಡಿಯೊಳಗೆ ನುಗ್ಗಿ ದಾಳಿ ನಡೆಸಲಾಗಿದೆ ಎಂದಷ್ಟೇ ಅಫ್ಗನ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪೂರ್ವ ಅಫ್ಗಾನಿಸ್ತಾನದ ಪಕ್ತಿಕಾ ಪ್ರಾಂತ್ಯದಲ್ಲಿ ಬುಧವಾರ ಪಾಕಿಸ್ತಾನ ಸೇನೆ ನಡೆಸಿದ ವಾಯುದಾಳಿಯಿಂದಾಗಿ ಮಹಿಳೆಯರು, ಮಕ್ಕಳು ಸೇರಿ 46 ಮಂದಿ ಮೃತಪಟ್ಟಿದ್ದರು.

ಅಫ್ಗನ್‌ ಸರ್ಕಾರದ ಉಪ ವಕ್ತಾರ ಹಮ್ದುಲ್ಲಾ ಫಿತ್ರತ್ ಅವರು, ಕ್ಷಿಪಣಿ ದಾಳಿಯಲ್ಲಿ ಕನಿಷ್ಠ ಆರು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದರು.

ಗಡಿಯಲ್ಲಿನ ತರಬೇತಿ ಸೌಲಭ್ಯವನ್ನು ನಾಶಪಡಿಸಲು ಹಾಗೂ ಒಳನುಸುಳುವಿಕೆ ತಡೆಯಲು ದಾಳಿ ನಡೆಸಲಾಗಿತ್ತು ಎಂದು ಪಾಕ್‌ನ ಅಧಿಕಾರಿಯೊಬ್ಬರು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.