ADVERTISEMENT

ತಾಲಿಬಾನಿಗಳಿಂದ 100ಕ್ಕೂ ಹೆಚ್ಚು ಮಾಜಿ ಅಧಿಕಾರಿಗಳ ಹತ್ಯೆ: ವಿಶ್ವಸಂಸ್ಥೆ ವರದಿ

ಏಜೆನ್ಸೀಸ್
Published 31 ಜನವರಿ 2022, 6:03 IST
Last Updated 31 ಜನವರಿ 2022, 6:03 IST
ಸಾಂದರ್ಭಿಕ ಚಿತ್ರ – ಕೃಪೆ: ರಾಯಿಟರ್ಸ್
ಸಾಂದರ್ಭಿಕ ಚಿತ್ರ – ಕೃಪೆ: ರಾಯಿಟರ್ಸ್   

ವಿಶ್ವಸಂಸ್ಥೆ: ತಾಲಿಬಾನ್ ಮತ್ತು ಅದರ ಮೈತ್ರಿ ಪಡೆಗಳು ಹಿಂದಿನ ಅಫ್ಗಾನಿಸ್ತಾನ ಸರ್ಕಾರದಲ್ಲಿ ಕಾರ್ಯನಿರ್ವಹಿಸಿದ್ದ ಅಧಿಕಾರಿಗಳು, ಭದ್ರತಾ ಸಿಬ್ಬಂದಿ, ಅಂತರರಾಷ್ಟ್ರೀಯ ಪಡೆಗಳಲ್ಲಿ ಕೆಲಸ ಮಾಡಿದವರೂ ಸೇರಿದಂತೆ 100ಕ್ಕೂ ಹೆಚ್ಚು ಮಂದಿಯನ್ನು ಹತ್ಯೆ ಮಾಡಿವೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.

ಅಫ್ಗಾನಿಸ್ತಾನದಲ್ಲಿ ಹೊಸ ಮೂಲಭೂತವಾದಿ ಆಡಳಿತಗಾರರಿಂದ ಮಾನವಹಕ್ಕುಗಳ ತೀವ್ರವಾದ ಉಲ್ಲಂಘನೆಯಾಗುತ್ತಿದೆ. ರಾಜಕೀಯ ಹತ್ಯೆಗಳು ಹೆಚ್ಚಾಗಿವೆ. ಮಹಿಳೆಯರ ಹಕ್ಕುಗಳು, ಪ್ರತಿಭಟನೆಯ ಹಕ್ಕುಗಳು ಮೊಟಕುಗೊಂಡಿವೆ ಎಂದು ವರದಿ ತಿಳಿಸಿದೆ.

‘ಹಿಂದಿನ ಸರ್ಕಾರದಲ್ಲಿ, ಭದ್ರತಾಪಡೆಗಳಲ್ಲಿ ಹಾಗೂ ಅಂತರರಾಷ್ಟ್ರೀಯ ಸೇನಾ ಪಡೆಗಳಲ್ಲಿ ಕೆಲಸ ಮಾಡಿದವರಿಗೆ ಕ್ಷಮಾದಾನ ನೀಡಿರುವುದಾಗಿ ತಾಲಿಬಾನ್ ಘೋಷಿಸಿತ್ತು. ಆದಾಗ್ಯೂ ಹತ್ಯೆ ಆರೋಪ, ಕಣ್ಮರೆ ಹಾಗೂ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ವರದಿಯಾಗುತ್ತಲೇ ಇವೆ’ ಎಂದು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌ ಅವರ ವರದಿ ಉಲ್ಲೇಖಿಸಿದೆ.

ADVERTISEMENT

100ಕ್ಕೂ ಹೆಚ್ಚು ಹತ್ಯೆಗಳಾಗಿರುವ ಬಗ್ಗೆ ವಿಶ್ವಾಸಾರ್ಹ ಮೂಲಗಳಿಂದಲೇ ಮಾಹಿತಿ ದೊರೆತಿದೆ. ಈ ಪೈಕಿ ಮೂರನೇ ಎರಡರಷ್ಟು ಅಧಿಕಾರಿಗಳು ಅಥವಾ ಅವರ ಅಧೀನದಲ್ಲಿರುವ ಸಂಸ್ಥೆಗಳು ಮಾಡಿಸಿದ ನ್ಯಾಯಾಂಗ ಹತ್ಯೆಗಳಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.