ADVERTISEMENT

ಯಾವುದೇ ಕಾರಣಕ್ಕೂ ದೇಶ ತೊರೆಯಲು ನೀಡಿದ ಗಡುವು ವಿಸ್ತರಿಸಲ್ಲ: ತಾಲಿಬಾನ್‌

ಡೆಕ್ಕನ್ ಹೆರಾಲ್ಡ್
Published 27 ಆಗಸ್ಟ್ 2021, 8:25 IST
Last Updated 27 ಆಗಸ್ಟ್ 2021, 8:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾಬೂಲ್‌: ವಿದೇಶಿಯರಿಗೆ ಅಫ್ಗಾನಿಸ್ತಾನವನ್ನು ತೊರೆಯಲು ನೀಡಲಾಗಿರುವ ಗಡುವನ್ನು ಯಾವುದೇ ಕಾರಣಕ್ಕೂ ವಿಸ್ತರಿಸುವುದಿಲ್ಲ ಎಂದು ತಾಲಿಬಾನ್‌ ಸ್ಪಷ್ಟಪಡಿಸಿದೆ.

ಅಫ್ಗಾನಿಸ್ತಾನದಿಂದ ವಿದೇಶಿಗರನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿರುವ ನಡುವೆ ಕಾಬೂಲ್‌ನ ಹಮೀದ್‌ ಕರ್ಜೈ ವಿಮಾನ ನಿಲ್ದಾಣದಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್‌ ದಾಳಿಯಿಂದ ಬಿಗುವಿನ ಸನ್ನಿವೇಶಕ್ಕೆ ನಿರ್ಮಾಣವಾಗಿದೆ.

ದುರ್ಘಟನೆಯಲ್ಲಿ ಸುಮಾರು 70 ನಾಗರಿಕರು ಮೃತಪಟ್ಟಿದ್ದಾರೆ. ಈ ಪೈಕಿ ಅಮೆರಿಕ 13 ಯೋಧರು ಸೇರಿದ್ದಾರೆ. ಮೃತಪಟ್ಟವರ ಪೈಕಿ 28 ಮಂದಿ ನಮ್ಮವರೂ ಸೇರಿದ್ದಾರೆ ಎಂದು ತಾಲಿಬಾನ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ADVERTISEMENT

ಕಾಬೂಲ್‌ನಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಜಾಲದ ಅಸ್ತಿತ್ವದ ಬಗ್ಗೆ ತಾಲಿಬಾನ್‌ ನಾಯಕರು ತನಿಖೆ ನಡೆಸಬೇಕು. ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಇತ್ತೀಚಿನ ವಾರಗಳಲ್ಲಿ ಸಾವಿರಾರು ಬಂಧಿತರನ್ನು ಜೈಲಿನಿಂದ ಹೊರಗೆ ತಂದಿದ್ದಾರೆ. ಭದ್ರತೆಯು ತಾಲಿಬಾನಿಗಳ ಜವಾಬ್ದಾರಿಯಾಗಿದೆ ಎಂದು ನ್ಯಾಟೋ ರಾಯಭಾರಿ ತಿಳಿಸಿದ್ದಾರೆ.

ಆಗಸ್ಟ್‌ 14ರಿಂದ ಇದುವರೆಗೆ ಅಫ್ಗಾನಿಸ್ತಾನದಿಂದ 1 ಲಕ್ಷಕ್ಕೂ ಹೆಚ್ಚು ಮಂದಿಯನ್ನು ತೆರವುಗೊಳಿಸಲಾಗಿದೆ ಎಂದು ವೈಟ್‌ ಹೌಸ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.