ADVERTISEMENT

ಉತ್ತರ ಆಫ್ಘನ್: ಹಲವು ಜಿಲ್ಲೆಗಳನ್ನು ವಶಪಡಿಸಿಕೊಂಡ ತಾಲಿಬಾನ್

ತಜಕಿಸ್ತಾನಕ್ಕೆ ಓಡಿಹೋದ ಆಫ್ಘನ್ ಸೇನಾಪಡೆಗಳು

ಏಜೆನ್ಸೀಸ್
Published 4 ಜುಲೈ 2021, 19:31 IST
Last Updated 4 ಜುಲೈ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾಬೂಲ್: ಸುಮಾರು ಎರಡು ದಶಕಗಳ ಬಳಿಕ ಆಫ್ಘಾನಿಸ್ತಾನದ ಬಗ್ರಾಮ್ ವಾಯುನೆಲೆಯನ್ನು ಅಮೆರಿಕ ತೊರೆದ ಬೆನ್ನಲ್ಲೇ, ಇತ್ತ ಉತ್ತರ ಅಫ್ಘಾನಿಸ್ತಾನದ ಕೆಲವು ಜಿಲ್ಲೆಗಳನ್ನು ತಾಲಿಬಾನ್‌ ಉಗ್ರಪಡೆಗಳು ವಶಪಡಿಸಿಕೊಂಡಿವೆ.

ತಾಲಿಬಾನ್‌ ಪಡೆಗಳಿಗೆ ಬೆದರಿದ ಆಫ್ಘನ್ ಸೈನಿಕರು ಸ್ಥಳದಿಂದ ಪಲಾಯನಗೈದಿದ್ದು, ನೂರಾರು ಜನರು ತಜಕಿಸ್ತಾನದ ಗಡಿ ಪ್ರದೇಶಕ್ಕೆ ಓಡಿಹೋದರು ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ತಾಲಿಬಾನ್ ಪಡೆಗಳು ಗಡಿಯತ್ತ ಮುನ್ನಡೆಯುತ್ತಿದ್ದಂತೆ, ಅಫ್ಘಾನಿಸ್ತಾನದ ಬಡಾಖಾನ್ ಪ್ರಾಂತ್ಯದಿಂದ 300ಕ್ಕೂ ಹೆಚ್ಚು ಆಫ್ಘನ್ ಮಿಲಿಟರಿ ಸಿಬ್ಬಂದಿ ಗಡಿ ದಾಟಿದ್ದಾರೆ ಎಂದು ತಜಕಿಸ್ತಾನದ ರಾಷ್ಟ್ರೀಯ ಭದ್ರತತಾ ರಾಜ್ಯ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

‘ಮಾನವತಾವಾದ ಮತ್ತು ಉತ್ತಮ ನೆರೆಹೊರೆಯ ತತ್ವಗಳ’ ಕಾರಣಕ್ಕಾಗಿ ತಜಕಿಸ್ತಾನದ ಅಧಿಕಾರಿಗಳು ಆಫ್ಘನ್‌ ರಾಷ್ಟ್ರೀಯ ರಕ್ಷಣಾ ಮತ್ತು ಭದ್ರತಾ ಪಡೆಗಳಿಗೆ ತಜಕಿಸ್ತಾನಕ್ಕೆ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗಿದೆ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಫ್ಘಾನಿಸ್ತಾನದ ಎಲ್ಲಾ 421 ಜಿಲ್ಲೆಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಮೂರನೇ ಒಂದು ಭಾಗವು ತಾಲಿಬಾನ್ ನಿಯಂತ್ರಣದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.