ADVERTISEMENT

ಸುಂಕ ವಿನಾಯಿತಿ ರದ್ದು: ಸಂಕಷ್ಟದಲ್ಲಿ ವಿದೇಶಿ ವ್ಯಾಪಾಸ್ಥರು

ಏಜೆನ್ಸೀಸ್
Published 26 ನವೆಂಬರ್ 2025, 15:50 IST
Last Updated 26 ನವೆಂಬರ್ 2025, 15:50 IST
   

ನ್ಯೂಯಾರ್ಕ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸುಂಕ ವಿನಾಯಿತಿಯನ್ನು ರದ್ದು ಮಾಡಿದ್ದರಿಂದ ಅಲ್ಲಿನ ಗ್ರಾಹಕರನ್ನು ನೆಚ್ಚಿಕೊಂಡಿದ್ದ ಕೆನಡಾ ವ್ಯಾಪಾರಸ್ಥರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಕೆನಡಾದ ಪ್ರಿನ್ಸ್‌ ಎಡ್ವರ್ಡ್‌ ದ್ವೀಪದ ಬುಕೊಲಿಕ್‌ ಬೆಲ್‌ಫಾಸ್ಟ್‌ನಲ್ಲಿರುವ ಉಣ್ಣೆ ಮತ್ತು ನೂಲಿನ ಅಂಗಡಿ ‘ಫ್ಲೀಸ್‌ ಆ್ಯಂಡ್‌ ಆ್ಯಂಪ್‌; ಹಾರ್ಮೋನಿ’ ಮಾಲೀಕರಾದ ಕಿಮ್‌ ದೊಹೆರ್ಟಿ ಅವರು ಅಮೆರಿಕದ ಗ್ರಾಹಕರಿಗೆ ನೂಲಿನ ಉಂಡೆಯನ್ನು ರಫ್ತು ಮಾಡುತ್ತಿದ್ದರು. ಮೊದಲು 800 ಡಾಲರ್‌ ಒಳಗಿನ ಬೆಲೆಯ ಪ್ಯಾಕೇಜ್‌ಗಳಿಗೆ ರಫ್ತು ವಿನಾಯಿತಿ ಇತ್ತು. ಆದರೆ ಟ್ರಂಪ್‌ ನೇತೃತ್ವದ ಆಡಳಿತವು ಆಗಸ್ಟ್‌ 29ರಿಂದ ಸು‌ಂಕ ವಿನಾಯಿತಿಯನ್ನು ರದ್ದು ಮಾಡಿದೆ. ಆನಂತರ ಅಮೆರಿಕದ ಗ್ರಾಹಕರಿಗೆ ನೂಲಿನ ಉಂಡೆ ಕಳುಹಿಸಲು ತಗಲುವ ವೆಚ್ಚ ದುಪ್ಪಟ್ಟಾಗಿದೆ. ಇದರಿಂದ ವ್ಯಾಪಾರಕ್ಕೆ ಹಿನ್ನಡೆ ಉಂಟಾಗಿದೆ.

ಅಮೆರಿಕದಲ್ಲಿ ರಜೆ ಆರಂಭವಾಗಿರುವುದರಿಂದ ಖರೀದಿಗೆ ಇದು ಸಂಕ್ರಮಣ ಕಾಲ. ಆದರೆ ಟ್ರಂಪ್‌ ಅವರ ನಿರ್ಧಾರದಿಂದ ಸಣ್ಣ ವ್ಯಾಪಾರಿಗಳು ಮತ್ತು ಅಂಗಡಿಗಳ ಮಾಲೀಕರು ಬೆಲೆ ಏರಿಕೆಯ ಬಿಸಿ ಅನುಭವಿಸುತ್ತಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.